🚨BREAKING NEWS, ಕುಂದಾಪುರ ರಾಜಕೀಯದಲ್ಲಿ ಸಂಚಲನ! ಬ್ಲಾಕ್ ಕಾಂಗ್ರೆಸ್ ನೂತನ – ಅಧ್ಯಕ್ಷರಾಗಿ ಕೆ. ಸದಾನಂದ ಶೆಟ್ಟಿ ಅಧಿಕೃತ ಪದಗ್ರಹಣ🚨

ಕುಂದಾಪುರ ಜು.17

📢 ಕುಂದಾಪುರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ:-

ಸಮಾವೇಶದಲ್ಲಿ ನೆರೆದ ಜನ ಸಾಗರ.

🚀ಕಾಂಗ್ರೆಸ್‌ನ ಗೆಲುವಿನ ಅಭಿಯಾನಕ್ಕೆ ಕಹಳೆ ಮೊಳಗಿದೆ! ಮುಂಬರುವ ದಿನಗಳಲ್ಲಿ ಕುಂದಾಪುರದಲ್ಲಿ ರಾಜಕೀಯ ಜಿದ್ದಾಜಿದ್ದಿ ತೀವ್ರ ಗೊಳ್ಳುವ ಸೂಚನೆ.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಇಂದು ನಡೆದ ಅದ್ಧೂರಿ ಪದಗ್ರಹಣ ಸಮಾರಂಭದಲ್ಲಿ, ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ “ಕೆ.ಸದಾನಂದ ಶೆಟ್ಟಿ” ಅವರು ಕುಂದಾಪುರ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

🔥ಬ್ರೇಕಿಂಗ್ ಪಾಯಿಂಟ್ಸ್:-

ಅದ್ದೂರಿ ಸಮಾರಂಭ:-

ಸಮಾರಂಭದಲ್ಲಿ ಉಕ್ಕಿ ಹರಿದ ಜನಸಾಗರ! ಕುಂದಾಪುರದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಕೆ. ಸದಾನಂದ ಶೆಟ್ಟಿ ಅಧಿಕಾರ ವಹಿಸಿಕೊಂಡರು.

ಒಗ್ಗಟ್ಟಿನ ಮಂತ್ರ:-

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, “ಸಣ್ಣಪುಟ್ಟ ಗೊಂದಲಗಳನ್ನು ಬದಿಗಿಟ್ಟು, ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಕುಂದಾಪುರದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲು ಸಾಧ್ಯ” ಎಂದು ಕರೆ ನೀಡಿದರು.

ರಣ ಕಹಳೆ ಮೊಳಗಿಸಿದ ಗಫೂರ್:-

“ಮುಂದಿನ ವಿಧಾನಸಭೆಯಲ್ಲಿ ಕುಂದಾಪುರ ದಿಂದ ಕಾಂಗ್ರೆಸ್ ಶಾಸಕರೇ ಪ್ರಮಾಣ ವಚನ ಸ್ವೀಕರಿಸಬೇಕು, ಇದೇ ನಮ್ಮ ಏಕೈಕ ಸಂಕಲ್ಪ” ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್ ಗುಡುಗಿದರು.

ಯುವ ಶಕ್ತಿ ಹಾಗೂ ಜನಪರ ಯೋಜನೆ:-

ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಯಶಸ್ಸನ್ನು ಪ್ರತಿ ಮನೆಗೂ ತಲುಪಿಸಿ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವಂತೆ ವಿನಯ್ ಕುಮಾರ್ ಸೊರಕೆ ಮತ್ತು ಮೊಳಹಳ್ಳಿ ದಿನೇಶ್ ಹೆಗ್ಡೆ ಕಾರ್ಯಕರ್ತರಿಗೆ ಹುರಿ ದುಂಬಿಸಿದರು.

ಕೆ.ಸದಾನಂದ ಶೆಟ್ಟಿ ಅವರ ಶಪಥ:-

“ನನ್ನ ರಾಜಕೀಯ ಬದುಕು ಭ್ರಷ್ಟಾಚಾರ ಮುಕ್ತವಾಗಿದೆ. ಬ್ಲಾಕ್ ವ್ಯಾಪ್ತಿಯ ಎಲ್ಲಾ 131 ಬೂತ್‌ಗಳಿಗೂ ಖುದ್ದಾಗಿ ಭೇಟಿ ನೀಡಿ, ಪ್ರತಿ ಹಂತದಲ್ಲೂ ಪಕ್ಷವನ್ನು ಬಲಪಡಿಸುತ್ತೇನೆ. ಕಾರ್ಯಕರ್ತರೇ ನನ್ನ ಶಕ್ತಿ” ಎಂದು ನೂತನ ಅಧ್ಯಕ್ಷರು ಭಾವುಕರಾಗಿ ನುಡಿದರು.

🌟ಸಮಾರಂಭದ ವೈಶಿಷ್ಟ್ಯ:-

ಈ ಸಮಾರಂಭಕ್ಕೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಸುಕುಮಾರ್ ಬಿ. ಶೆಟ್ಟಿ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಮುಖಂಡರು ಮತ್ತು ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button