ನಾಳೆ ನಡೆಯ ಬೇಕಾಗಿದ್ದ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿ ವರೆಗೆ ಮುಂದೂಡಲಾಗಿದೆ ಎಂದು – ಸಮಿತಿಯ ಅಧ್ಯಕ್ಷರು ಡಾ, ಸೋಮಶೇಖರ.ಡಿ ಹೊಸಮನಿ ತಿಳಿಸಿದ್ದಾರೆ.

ಇಲಕಲ್ಲ ಮೇ.27

ಇಂದು ಇಲಕಲ್ಲ ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಮುದಾಯದ ಅಧ್ಯಕ್ಷರು ಮತ್ತು ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಸೇರಿ ನಾಳೆ ನಡೆಯ ಬೇಕಾಗಿದ್ದ ಕಾರ್ಯಕ್ರಮವನ್ನು ರಾಜಕೀಯ ಕ್ಷೀಪ್ರಕ್ರಾಂತಿಯ ಬೆಳವಣಿಗೆ ಹಾಗೂ ಹವಾಮಾನ ವೈಪರೀತ್ಯಗಳಿಂದ ಹಾಗೂ ಹಲವು ಕಾರಣಾಂತರಗಳಿಂದ ಈ ಡಾ, ಬಾಬು ಜಗಜೀವನ್ ರಾಮ್ ಅವರ 119 ನೇ. ಜಯಂತೋತ್ಸವ ಸಮಾರಂಭ ಹಾಗೂ – ಕುಂಭ ಮೇಳ ಭವ್ಯ ಮೆರವಣಿಗೆ & ಬಹಿರಂಗ ಸಭೆ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ ಎಂದು ಸಮಿತಿಯ ಅಧ್ಯಕ್ಷರು ಡಾ, ಸೋಮಶೇಖರ.ಡಿ ಹೊಸಮನಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಹಾಗೂ ನಿರ್ದೇಶಕರು ಭೂ ನ್ಯಾಯ ಮಂಡಳಿ ಹುನಗುಂದ ತಾಲೂಕ ದುರುಗಪ್ಪ.ಡಿ ಹೊಸಮನಿ, ಸತ್ಯಪ್ಪ ದಳವಾಯಿ, ಸಿದ್ದಪ್ಪ ಮಾದರ, ಆನಂದ ತುಂಬದ, ಸಂತೋಷ ರಾಮವಾಡಗಿ, ಮಹಾಂತೇಶ ಮದ್ನಾಳ, ಇನ್ನಿತರರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button