ಆರ್.ಟಿ.ಪಿ.ಸಿ/ವಾಯ್.ಟಿ.ಪಿ.ಎಸ್ ಹಾಗೂ ಪ.ಜಾ/ಪ.ವ ದ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ – ಡಾ, ಬಿ.ಆರ್ ಅಂಬೇಡ್ಕರ್ 135 ನೇ. & ಡಾ, ಬಾಬು ಜಗಜೀವನ್ ರಾಮ್ 119 ನೇ. ಜಯಂತಿ ಕಾರ್ಯಕ್ರಮ ಜರಗಿತು.
ರಾಯಚೂರು ಮೇ.27

ದಿನಾಂಕ:- 21-05-2026 ರಂದು ಸಂಜೆ 6 ಗಂಟೆಗೆ ಡಾ. B R ಅಂಬೇಡ್ಕರ್ ಭವನ ಶಕ್ತಿ ನಗರದಲ್ಲಿ ಕ.ವಿ.ನಿ.ನಿ RTPS/YTPS ಹಾಗೂ ಪ.ಜಾ/ಪ.ವ. ದ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ 135 ನೇ. ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ 119 ನೇ. ಜಯಂತಿ ಆಚರಣೆ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಅಶೋಕ ಎಂ ಬಮನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು (ವೈಟಿಪಿಎಸ್) ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಡಾ, B.R ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ರವರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ, ಸುರೇಶ ಗೌತಮ್, ಸಹಾಯಕ ಪ್ರಾಧ್ಯಾಪಕರು ಇವರು ಡಾ, B. R ಅಂಬೇಡ್ಕರ್ ಹಾಗೂ ಡಾ, ಬಾಬು ಜಗಜೀವನ್ ರಾಮ್ ರವರು ಎರಡು ಭೂನಕ್ಷತ್ರ ಎಂದು ತಿಳಿಸಿ ಅದ್ಭುತವಾಗಿ ಅರ್ಥಪೂರ್ಣವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು RTPS ಯೋಜನಾ ಪ್ರದೇಶದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ರಮೇಶ ಹೆಚ್.ಆರ್. ಸಾಹೇಬರು ವಹಿಸಿದ್ದರು, CE (O&M) RTPS ರವರು ನಿಗಮದ RTPS &YTPS ಯೋಜನೆಗಳ ವಿದ್ಯುತ್ ಉತ್ಪಾದನೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮ ಅಭೂತಪೂರ್ವ ಯಶಸ್ವಿ ಯಾಗಲು ಕಾರಣೀಭೂತರಾದ ವೇದಿಕೆ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ ಹಾಗೂ ಆಹಾರ ಸಮಿತಿಯ ಅಧ್ಯಕ್ಷರು, ಸಂಚಾಲಕರು ಸದಸ್ಯರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು /ಕಾರ್ಯದರ್ಶಿಗಳು, RTPS /YTPS ನ ಎಲ್ಲಾ ಅಧಿಕಾರಿ /ಉದ್ಯೋಗಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

