ಸಮರ್ಪಕ ಕುಡಿಯುವ ನೀರು ಆಗ್ರಹಿಸಿ 23 ದಿನ ಕಳೆದರೂ ಬಾರದ ನೀರು – ಗ್ರಾಮಸ್ಥರಿಂದ ಪ್ರತಿಭಟನೆ.
ಕುಂಟೋಜಿ ಮೇ.27

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಎದುರು ಕುಂಟೋಜಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು, ಗ್ರಾಮದಲ್ಲಿ ಕಳೆದ 23 ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗಿಲ್ಲ ಎಂದು ಪಂಚಾಯಿತಿ ಎದುರು ಖಾಲಿ ಬಿಂದಿಗೆ ಇಟ್ಟು, ಪಿಡಿಓ ಹಾಗೂ ಸಿಬ್ಬಂದಿ ವಿರುದ್ಧ ಆಕಾಶ ವ್ಯಕ್ತಪಡಿಸಿದರು.
ಗ್ರಾಮಸ್ಥ ಸಿದ್ದು ಹೆಬ್ಬಾಳ್ ಮಾತನಾಡಿ ಪಿಡಿಓ ಮೋಹನ್ ಹುಲ್ಲೂರು ಬೇಜವಾಬ್ದಾರಿತನ ದಿಂದ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ, ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸ ಬೇಕು, ಪ್ರತಿ ಮನೆಗೂ ನೀರು ಪೂರೈಕೆ ಆಗುವ ವರೆಗೂ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ್ ಲಿಂಗದಳ್ಳಿ, ಪ್ರಕಾಶ್ ಹೂಗಾರ್, ಮುತ್ತು ಮಡಿವಾಳರ್, ಶೇಖಪ್ಪ ಕೊಳುರ್, ಮಂಜುನಾಥ್ ಜುಗತಿ, ಭೀಮನಗೌಡ ಬಿರಾದಾರ, ಸಂಗಮೇಶ್ ಗುತ್ತೇದಾರ, ವಿಜಯಕುಮಾರ್ ಶಿಖಳವಾಡಿಮಠ, ರಾಜು ಅಗ್ನಿ, ರಾಮಣ್ಣ ಕವಡಿಮಟ್ಟಿ, ದುರ್ಗಪ್ಪ ಕವಡಿಮಟ್ಟಿ, ರಾಜು ಕಾಟಿ, ಅನಿಲ್ ಪಲ್ಲೆದ, ಇನ್ನೂ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.
“ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ” ಇತ್ತೀಚಿಗೆ ಸುರಿದ ಭಾರೀ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಕುಂಟೋಜಿ ಸೇರಿದಂತೆ 18 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆ ಉಂಟಾಗಿದೆ.
ಸದ್ಯಕ್ಕೆ ಗ್ರಾಮ ಪಂಚಾಯಿತಿ ವತಿಯಿಂದಲೇ ಮೋಟಾರು ಖರೀದಿಸಿ ಕೊಳವೆ ಬಾವಿ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಕ್ರಮ ವಹಿಸಲಾಗುವುದು. ಆದಷ್ಟು ಬೇಗ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಪಿ.ಡಿ.ಓ ಮೋಹನ್ ಹುಲ್ಲೂರ್ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್.ಬಸವರಾಜ ಸಂಕನಾಳ ಮುದ್ದೇಬಿಹಾಳ

