ಸಾರ್ಥಕ ಗೃಹಸ್ಥ ಜೀವನಕ್ಕೆ ಆಧ್ಯಾತ್ಮ ಅತ್ಯವಶ್ಯಕ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜೂ.11
ಗೃಹಸ್ಥ ಜೀವನದ ಸಾರ್ಥಕತೆಗೆ ಆಧ್ಯಾತ್ಮ ಅತ್ಯವಶ್ಯಕವಾಗಿ ಬೇಕಾಗಿದ್ದು ಇದರ ಅನುಸರಣೆ ಯಿಂದ ಬದುಕಿನಲ್ಲಿ ಸುಖ-ಶಾಂತಿ ನೆಮ್ಮದಿಯನ್ನು ಪಡೆಯಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.
ಶಿವ ನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ಜಿ.ವಿ.ಎಸ್ ನಿವಾಸದಲ್ಲಿ “ಶ್ರೀಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಅಧಿಕ ಮಾಸ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಧ್ಯಾನಾಭ್ಯಾಸ ನಡೆಸಿ ಕೊಟ್ಟ ಅವರು “ಗೃಹಸ್ಥ ಜೀವನದಲ್ಲಿ ಆಧ್ಯಾತ್ಮ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡುತ್ತಿದ್ದರು.

ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ, ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಜಿ ಯಶೋಧಾ ಪ್ರಕಾಶ್, ಮಂಗಳಾ ಯಶವಂತ್, ಶಾಂತಮ್ಮ, ರಶ್ಮಿ, ಶೈಲಜಾ, ಕೃಷ್ಣವೇಣಿ, ಸಂಗೀತ, ಭ್ರಮರಂಬಾ, ವೀರಮ್ಮ, ವಿಜಯಲಕ್ಷ್ಮೀ, ಭಾಗ್ಯಲಕ್ಷ್ಮೀ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಯಮ್ಮ, ಜಯಶೀಲಮ್ಮ, ಉಷಾ ಶ್ರೀನಿವಾಸ್, ಬಿ.ಸುಮನಾ, ಅಂಬುಜಾ, ಕವಿತಾ, ನಾಗರತ್ನಮ್ಮ, ಅಂಬಿಕಾ, ಲತಾ, ಸೌಮ್ಯ, ರಾಜೇಶ್ವರಿ, ಗೀತಾ ವೆಂಕಟೇಶ್ ರೆಡ್ಡಿ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

