ಮಕ್ಕಳು ತಮ್ಮ ಸುಪ್ತ ಶಕ್ತಿ ಸಾಮರ್ಥ್ಯಗಳನ್ನು ಜಾಗೃತ ಗೊಳಿಸಿ ಕೊಳ್ಳಬೇಕು – ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ಜೂ.09

ಮಕ್ಕಳು ತಮ್ಮಲ್ಲಿರುವ ಸುಪ್ತ ಶಕ್ತಿ ಸಾಮರ್ಥ್ಯಗಳನ್ನು ಜಾಗೃತ ಗೊಳಿಸಿ ಕೊಂಡು ಸಮರ್ಥ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನೆ ನಡೆಸಿ ಕೊಡುತ್ತ ಅವರು ಮಾತನಾಡುತ್ತಿದ್ದರು.

ಶಿಬಿರದ ಪ್ರಯುಕ್ತ ಮಕ್ಕಳಿಂದ ಧ್ಯಾನ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ, ಅಮ್ಮಾ ಶಾರದಾಮಾತೆ ಪಠಣ, ಜೈಕಾರ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ತರಗತಿಯಲ್ಲಿ ಮಾತಾಜೀ ತ್ಯಾಗಮಯೀ, ಸಂತೋಷ್, ಯಶಸ್, ಗಾಯನ, ಶ್ಯಾಮ್, ವಿವಿಕ್ತ, ನಮ್ರತಾ, ಸಾನ್ವಿ, ಜಸ್ವಿತಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

