13 ಕ್ಕೆ ಶ್ರೀಶಾರದಾಶ್ರಮ ದಿಂದ ದಿನಸಿ – ಕಿಟ್ ವಿತರಣೆ.
ಚಳ್ಳಕೆರೆ ಜೂ.12

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮ ದಿಂದ ಪ್ರತಿ ತಿಂಗಳು ಜೀವ ಶಿವ ಸೇವೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುತ್ತಿರುವ ದಿನಸಿ ಕಿಟ್ ಗಳನ್ನು ಈ ಬಾರಿ ಚಿಂದಿ ಆಯುವ ಮಹಿಳೆಯರಿಗೆ ವಿತರಿಸಲಾಗುತ್ತಿದ್ದು ಈ ಕಾರ್ಯಕ್ರಮವು ಜೂನ್ 13 ರ ಶನಿವಾರ ಸಂಜೆ 5.45 ರಿಂದ ಆಶ್ರಮದ ದೇವಸ್ಥಾನದಲ್ಲಿ ನಡೆಯಲಿದ್ದು.
ಕಾರ್ಯಕ್ರಮದ ಪ್ರಯುಕ್ತ ಭಜನೆ ಮತ್ತು ಪ್ರವಚನವನ್ನು ಏರ್ಪಡಿಸಲಾಗಿದ್ದು ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

