ತೀರ್ಥ ಕ್ಷೇತ್ರಗಳು ಭಗವಂತನ ಆಧ್ಯಾತ್ಮಿಕ ಲೀಲಾ ಸ್ಥಾನಗಳು – ಜಯಮ್ಮ ನರಸಿಂಹಮೂರ್ತಿ.

ಚಳ್ಳಕೆರೆ ಜೂ.12

ದಿವ್ಯತ್ರಯರ ಅದ್ಭುತ-ಅಮೋಘ ಅಲಂಕಾರ 🪷🪻

ಮಂಗಳಾರತಿ

ತೀರ್ಥ ಕ್ಷೇತಗಳು ಭಗವಂತನ ವಿಶೇಷ ಆಧ್ಯಾತ್ಮಿಕ ಲೀಲಾ ಸ್ಥಾನಗಳಾಗಿದ್ದು ಅವುಗಳ ಯಾತ್ರೆ ಯಿಂದ ನಮ್ಮಲ್ಲಿ ಆಧ್ಯಾತ್ಮಿಕ ಜಾಗೃತಿ ಉಂಟಾಗುತ್ತದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅಭಿಪ್ರಾಯ ಪಟ್ಟರು.

ಶ್ರೀಮತಿ ಗೀತಾ ಪ್ರಕಾಶ್ ಅವರಿಂದ ಅಲ್ಲಮಪ್ರಭುಗಳ ವಚನ ಗಾಯನ

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಮಹಾತೀರ್ಥಗಳಲ್ಲಿ ಮಹಾಮಾತೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ಶ್ರೀಮತಿ ಸುನೀತಾ ಅವರಿಂದ ಇದೇ ರಾಮನಾಮ ಭಜನೆ

1886 ರಲ್ಲಿ ಶ್ರೀರಾಮಕೃಷ್ಣ ಪರಮಹಂಸರ ಮಹಾ ಸಮಾಧಿಯ ನಂತರ ಪತಿಯ ಮರಣ ವೇದನೆಯನ್ನು ಮರೆಯಲು ಶ್ರೀಮಾತೆ ಶಾರದಾದೇವಿಯವರು ಕೈಗೊಂಡ ತೀರ್ಥಯಾತ್ರೆಗೆ ಬಹಳ ಮಹತ್ವವಿದೆ. ಅವರು ವೈದ್ಯನಾಥ, ವಾರಾಣಾಸಿ, ಬೃಂದಾವನ, ಪ್ರಯಾಗಕ್ಕೆ ಕೈಗೊಂಡ ತೀರ್ಥಯಾತ್ರೆಗಳಿಂದ ಆ ಕ್ಷೇತ್ರಗಳು ಪವಿತ್ರ ಗೊಂಡವು ಎಂದು ತಿಳಿಸಿದರು.

“ಮಹಾ ತೀರ್ಥಗಳಲ್ಲಿ ಮಹಾ ಮಾತೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅವರಿಗೆ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಗೀತಾ ಸುಂದರೇಶ್ ದೀಕ್ಷಿತ್ ಅವರಿಂದ “ವಿವೇಕಪ್ರಭ” ಪುಸ್ತಕ ಮತ್ತು ಕಿರು ಕಾಣಿಕೆಯ ಸಮರ್ಪಣೆ

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ಶೋಭಾ ರಮೇಶ್, ಸುನೀತಾ, ಗೀತಾ ಸುಂದರೇಶ್ ದೀಕ್ಷಿತ್, ಪ್ರಮೀಳಾ ಜಗದೀಶ್, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆ ನಡೆದರೆ ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗ ಸಭೆಯಲ್ಲಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ಸಿರಿಚಂದನ, ಸುವರ್ಣಮ್ಮ, ಅನುಸೂಯ, ರಾಘವೇಂದ್ರ, ಪ್ರೇಮಾ, ಸುನೀತಾ, ದ್ರಾಕ್ಷಾಯಣಿ, ಸೌಮ್ಯ ಪ್ರಸಾದ್, ಪುಷ್ಪ ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button