ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್ ನಲ್ಲಿ ನಿವೃತ್ತಿ ಪ್ರಾಚಾರ್ಯರಾದ ಶ್ರೀ ಎನ್.ಎ ಬಿರಾಜದಾರ ಅವರ – ವಯೋ ನಿವೃತ್ತಿ ಗೌರವ ಸಮಾರಂಭ ಕಾರ್ಯಕ್ರಮ.
ಮುದ್ದೇಬಿಹಾಳ ಜೂ.15

ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್ ನಲ್ಲಿ ಜೂನ್ 16 ಮಂಗಳವಾರ ದಂದು ಡಾ, ದೇಗಿನಾಳ ಪರಿವಾರ ಹಾಗೂ ದೇಗಿನಾಳ ಫಾರ್ಮ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಢವಳಗಿ ಗ್ರಾಮದ ಸನಾತನ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಶ್ರೀಯುತ ಎನ್ ಎ ಬಿರಾಜದಾರ ಅವರಿಗೆ ವಯೋ ನಿವೃತ್ತಿ ಗೌರವ ಸನ್ಮಾನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಪ.ಪೂ.ಶ್ರೀ.ಷ.ಬ್ರ. ಡಾ, ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಭಾವೈಕ್ಯತಾ ಹಿರೇಮಠ ಕುಂಟೋಜಿ ಅವರು ದಿವ್ಯಸಾನಿಧ್ಯ ವಹಿಸಿವರು. ಡಾ, ಎಮ್.ಎ ದೇಗಿನಾಳ ವೈದ್ಯರು ಅಧ್ಯಕ್ಷತೆ ವಹಿಸುವರು, ನಾಗರಬೆಟ್ಟ ಆಕ್ಸ್‌ಫರ್ಡ್ ಪಾಟೀಲ ಸಂಸ್ಥೆಯ ಮುಖ್ಯಸ್ಥರಾದ ಎಮ್ ಎಸ್ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ, ಎ.ಎಮ್ ಮುಲ್ಲಾ ಪ್ರಖ್ಯಾತ ವೈದ್ಯರು, ಡಾ, ಪರಶುರಾಮ ವಡ್ಡರ ಆಡಳಿತ ವೈದ್ಯಾಧಿಕಾರಿ ತಾಲ್ಲೂಕು ಆಸ್ಪತ್ರೆ ಮುದ್ದೇಬಿಹಾಳ. ಕಾಮರಾಜ ಬಿರಾದಾರ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಮುದ್ದೇಬಿಹಾಳ, ಕೆ ಆರ್ ಎತ್ತಿನಮನಿ ಜಿಲ್ಲಾದ್ಯಕ್ಷರು ಔಷದ ವ್ಯಾಪಾರಿಗಳ ಸಂಘದ ವಿಜಯಪುರ, ಜಿ ಎಮ್ ಹಿರೇಮಠ ತಾಲ್ಲೂಕು ಅಧ್ಯಕ್ಷರು ಔಷಧ ವ್ಯಾಪಾರಿಗಳ ಸಂಘ ಮುದ್ದೇಬಿಹಾಳ, ಎಸ್ ಎಸ್ ಹೊಸಮನಿ ವಿಶ್ರಾಂತ ಪ್ರಾಚಾರ್ಯರು ಹಾಗೂ ದೇಗಿನಾಳ ಪಾರ್ಮ ಮಾಲೀಕರಾದ ಶಬ್ಬಿರ್ ಎ ದೇಗಿನಾಳ ಸ್ವಾಗತ ಕೋರುವವರು ಎಂದು ದೇಗಿನಾಳ ಪರಿವಾರದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:-ಜಿಎನ್ ಬೀರಗೊಂಡ (ಮುತ್ತು) ಢವಳಗಿ
