ಕೃಷಿಕ, ಕಾರ್ಮಿಕ, ಸೈನಿಕ ಸಮಾಜದ ಆಧಾರ ಸ್ತಂಭಗಳು – ಅಶೋಕ ಮನಗೂಳಿ.
ರಾಂಪುರ (ಟಿ.ಎ) ಜೂ.13

ಸಿಂದಗಿ ತಾಲೂಕಿನ ರಾಂಪುರ (ಪಿ.ಎ) ಗ್ರಾಮದ ಆರೂಢದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ದಿನ ನಡೆದ ಕೃಷಿ ಇಲಾಖೆ. ಹಾಗೂ ಕೃಷಿಕ ಸಮಾಜದ ವತಿಯಿಂದ ಸಿಂದಗಿ ದೇವರ ಹಿಪ್ಪರಗಿ ಆಲಮೇಲ ಮೂರು ತಾಲ್ಲೂಕುಗಳ ರೈತರಿಗಾಗಿ ಹಮ್ಮಿಕೊಂಡಿದ್ದ ಕೃಷಿ ಕಾರ್ಯಗಾರವನ್ನು ಶಾಸಕ ಅಶೋಕ ಮನಗೂಳಿ ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಕೃಷಿಕ. ಕಾರ್ಮಿಕ. ಸೈನಿಕ ಇವರು ಸಮಾಜದ ಆಧಾರ ಸ್ತಂಭಗಳು. ಅದರಲ್ಲೂ ಕೃಷಿಕ ಜೀವನಾಡಿ ರೈತರು ಹೊಸ ಹೊಸ ತಂತ್ರಜ್ಞಾನಿಗಳು ಬಳಕೆ ಮಾಡಿ ಕೊಳ್ಳುವ ಮೂಲಕ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಡೆಯುತ್ತಿದೆ ಕೃಷಿ ಕಾರ್ಯಗಾರವನ್ನು. ತಾಲ್ಲೂಕು ಕೇಂದ್ರ ಗ್ರಾಮೀಣ ಭಾಗಗಳಿಗೆ ವಿಸ್ತರಿಸಲು ಸೂಚನೆ ನೀಡಿದ ಪ್ರಕಾರ ಈಗ ಗ್ರಾಮೀಣ ಭಾಗದಲ್ಲಿ ಹತ್ತಿ ಬೆಳೆಯಲ್ಲಿ ಉತ್ವಾದಕತೆ ಹೆಚ್ಚಿಸುವ ಉದ್ದೇಶದಿಂದಾಗಿ.
ಹತ್ತಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಆಧುನಿಕ ತಂತ್ರಜ್ಞಾನ. ಗಳ ಕುರಿತು ರೈತರಗಾಗಿ ಒಂದು ದಿನದ ಕಾರ್ಯಗಾರ ಹಮ್ಮಿಕೊಂಡಿರುವ ಕೃಷಿ ಅಧಿಕಾರಿಗಳು ಅಭಿನಂದನಾ ರ್ಹರರು ಎಂದರು.

ನನ್ನ ಮೂರು ವರ್ಷಗಳ ಅವಧಿಯಲ್ಲಿ ರೈತರಿಗೆ 635ಹಸುಗಳನ್ನು ನೀಡುವ ಮೂಲಕ ಹೈನುಗಾರಿಕೆ ಪ್ರೋತ್ಸಾಹ ನೀಡಲಾಗಿದೆ. ರೈತರು ಸರಕಾರದ ವಿವಿಧ ಯೋಜನೆಗಳ ಲಾಭಗಳನ್ನು ಪಡೆದು ಕೊಳ್ಳುವಂತೆ ತಿಳಿಸಿದರು. ಕೃಷಿ ಜಂಟಿ ನಿರ್ದೇಶಕ ಎಸ್ ಎಸ್ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ.
ಶಾಸಕರು ನಮ್ಮ ಕೃಷಿ ಇಲಾಖೆಗೆ ಬೆನ್ನೆಲುಬಾಗಿದ್ದಾರೆ. ಸರಕಾರದಿಂದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುತ್ತಿದ್ದಾರೆ. ಕೃಷಿಯೂ ಕೂಡ ವಿಜ್ಞಾನವೇ ಆಗಿದೆ. ಹೀಗಾಗಿ ಅದರಲ್ಲಿ ಹೊಸತನ ಬೇಕಿದೆ. ಹತ್ತಿ ಬೆಳೆ ಇಳುವರಿ ಗಣನೀಯವಾಗಿ ದ್ವಿಗುಣ ಗೂಳ್ಳುತ್ತಲಿದೆ.
ಸಿಂದಗಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ. ದೇವರ ಹಿಪ್ಪರಗಿ ತಾಲ್ಲೂಕು ಮಣೂರ ಗ್ರಾಮದ ರೈತ ಚಂದ್ರಕಾಂತ ಪ್ಯಾಟಿ ಮಾತನಾಡಿದರು.ಆಸಂಗಿಹಾಳ ಅರೂಢ ಮಠದ ಮಹಾರಾಜರು ಸಾನ್ನಿಧ್ಯ ವಹಿಸಿದರು.ಆಲಮೇಲ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಿಂಗನಗೌಡ ಪಾಟೀಲ. ದೇವರ ಹಿಪ್ಪರಗಿ ಅಧ್ಯಕ್ಷ ಸಿದ್ದು ಆನಂದಿ. ಸಿಂದಗಿ ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ.
ಆಲಮೇಲ ಎಪಿಎಂಸಿ ಅಧ್ಯಕ್ಷ ಬಸವರಾಜ್ ಬಾಗೇವಾಡಿ. ರೈತರದ ಬಾಗಪ್ಪ ಗೌಡ ಪಾಟೀಲ. ಆಹೇರಿ ಅಶೋಕ ಅಲ್ಲಾಪುರ ಗಂಗಾಧರ್ ಚಿಂಚೋಳಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಅಶೋಕ ಕೋಳಾರಿ ಆಲಮೇಲ ಕೃಷಿಕ ಸಮಾಜದ ಉಪಾಧ್ಯಕ್ಷ ಬಸಯ್ಯ ಹಿರೇಮಠ ಹಾಗೂ ವಿವಿಧ ರೈತರು ಮುಖಂಡರು ಭಾಗವಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

