ಶರಣಾಗತ ಭಕ್ತರ ಯೋಗ ಕ್ಷೇಮವನ್ನು ಭಗವಂತ ನೋಡಿ ಕೊಳ್ಳುತ್ತಾನೆ – ಪೂಜ್ಯ ವೈ.ರಾಜಾರಾಮ್ ಗುರುಗಳು.

ಚಳ್ಳಕೆರೆ ಜೂ.16

ಭಕ್ತನಾದವನು ಅಪೇಕ್ಷೆ ರಹಿತನಾಗಿ ಭಗವಂತನಲ್ಲಿ ಪೂರ್ಣ ಶರಣಾಗತಿಯನ್ನು ಬೆಳೆಸಿ ಕೊಂಡರೆ ದೇವರೆ ಅವರ ಯೋಗ ಕ್ಷೇಮವನ್ನು ನೋಡಿ ಕೊಳ್ಳುತ್ತಾನೆ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ.ರಾಜಾರಾಮ್ ಗುರುಗಳು ತಿಳಿಸಿದರು.

ಶಿವ ನಗರದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಅಧಿಕ ಮಾಸ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಅನನ್ಯ ಭಕ್ತಿ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಭಕ್ತಿ ಎಂಬುದು ಭಗವಂತನ ಮೇಲಿನ ನಂಬಿಕೆ, ಅತ್ಯುನ್ನತ ಪ್ರೇಮವಾಗಿದ್ದು ಅನನ್ಯ ಭಕ್ತರು ದೇವರಿಗೆ ಇಷ್ಟ ವಾಗುತ್ತಾರೆ. ಭಕ್ತರು ಭಗವಂತನಲ್ಲಿ ಶ್ರದ್ಧಾ ಭಕ್ತಿಯನ್ನು ಬೆಳೆಸಿ ಕೊಂಡಾಗ ಅವನ ದರುಶನ ಭಾಗ್ಯ ಸಾಧ್ಯ ವಾಗುತ್ತದೆ ಎಂದು ಅನನ್ಯ ಭಕ್ತಿಗೆ ಸಂಬಂಧಿಸಿದ ಅನೇಕ ದೃಷ್ಟಾಂತ ಕಥೆಗಳ ಮೂಲಕ ವಿವರಿಸಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಶ್ರೀಮತಿ ಗೀತಾ ಪ್ರಕಾಶ್, ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಶ್ಲೋಕಗಳ ಪಠಣ, ಮಂಗಳಾರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು‌.

ವಿಶೇಷ ಸತ್ಸಂಗದಲ್ಲಿ ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಶಾಂತಮ್ಮ, ಮಂಗಳಾ ಯಶವಂತ್, ಲಕ್ಷ್ಮೀದೇವಮ್ಮ, ವಿಜಯಲಕ್ಷ್ಮೀ, ಗೀತಾಲಕ್ಷ್ಮೀ, ಶಾರದಮ್ಮ, ನಾಗರತ್ನಮ್ಮ,ಭಾಗ್ಯಲಕ್ಷ್ಮೀ, ಪುಷ್ಪ, ಪ್ರೇಮಾ, ಸರ್ವಮಂಗಳ, ಜಯಮ್ಮ, ದ್ರಾಕ್ಷಾಯಣಿ, ಗೀತಾ, ವೆಂಕಟೇಶರೆಡ್ಡಿ, ಗೀತಾ ಸತ್ಯನಾರಾಯಣ, ಶೈಲಜಾ, ಕೃಷ್ಣವೇಣಿ, ಸಂಗೀತ, ರಶ್ಮಿ, ಸರಸ್ವತಿ, ಗಂಗಾಧರಶೆಟ್ಟಿ, ಉಷಾ ಶ್ರೀನಿವಾಸ್, ಸುಶೀಲಾಮ್ಮ, ಅಂಬಿಕಾ, ಜಯಶೀಲಮ್ಮ, ಬಿ.ಸುಮನಾ, ಕವಿತಾ, ಭ್ರಮರಂಬಾ, ಗೀತಾ ಭಕ್ತವತ್ಸಲ, ಜಯಮ್ಮ, ಲೀಲಾವತಿ, ವೀರಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button