ಅಕ್ಷರ ಜ್ಞಾನ ನೀಡಿದವರಷ್ಟೇ ಗುರುಗಳು ಅಲ್ಲ, ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ತೋರಿದವರೆಲ್ಲರು – ಗುರುಗಳು ಆಶೋಕ ಬಡಗೇರ.

ಆಲಮೇಲ ಜೂ.18

ಗುರು ಕರಣ ವಿಲ್ಲದವರ ಸಂಘ ಸಾಯೋ ತನಕ ಬೇಡ, ಸಾಧು ಸತ್ಪೂರುಷರ ಸೇವೆ ಮಾಡಿ ಕೊಂಡಿರುವದು ಬಹು ಪಾಢ ಎಂಬಂತೆ ನಮ್ಮ ಜೀವನದಲ್ಲಿ ಕೇವಲ ಅಕ್ಷರ ಜ್ಞಾನ ನೀಡಿದವರಷ್ಟೇ ಗುರುಗಳು ಅಲ್ಲ, ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ತೋರಿದವರೆಲ್ಲರು ಗುರುಗಳೆ ಎಂಬುದು ತಮ್ಮ ಭಾವನೆ ವ್ಯಕ್ತಪಡಿಸಿದರು.

ನಮ್ಮದು ಅವಿಭಕ್ತ ಕುಟುಂಬ, ತಂದೆ ವೀರಭದ್ರ, ತಾಯಿ ಈರಮ್ಮ. ನನ್ನ ಜೀವನದಲ್ಲಿ ಮೊದಲ ಗುರುಗಳಾದವರು ನನ್ನ ತಂದೆ ಒಕ್ಕಲುತನ ಮಾಡುತ್ತಾ ಮತ್ತೆ ತಾಯಿ ಮನೆ ಗೆಲಸ ಮಾಡುತ್ತಾ ಇದ್ದವರು. ನಮ್ಮ ತಂದೆ ತಾಯಿ ಇಬ್ಬರೂ ಶಿಕ್ಷಣದಿಂದ ವಂಚಿತ ರಾಗಿದ್ದರೂ ಕೂಡಾ ಅವರು ಕಲಿಸಿದ ಪಾಠಗಳು ಅನೇಕ.

ಅವರಿಗೆ ನಾವು ಮೂರು ಜನ ಮಕ್ಕಳು ನನ್ನ ಅಣ್ಣ (ಸಿದ್ದಣ್ಣ) ನಾನು ಮತ್ತೆ ನನ್ನ ತಂಗಿ (ಗಂಗಾಬಾಯಿ) ಮನೆಯಲ್ಲಿ ಬಡತನ ಪರಿಸ್ಥಿತಿ ಕಠಿಣವಾಗಿದ್ದರೂ ನಮಗೆ ಕಲಿಸುವ ಹಂಬಲ ಇವರದಾಗಿತ್ತು.

ಅವರ ಆಸೆಯಂತೆ ನಾವು ಪ್ರಾಥಮಿಕ ಶಿಕ್ಷಣವನ್ನು ದೇವರ ನಾವದಗಿಯಲ್ಲಿ ಮುಗಿಸಿದೆವು. ಮನೆಯ ಬಡತನ ಅರಿತಿದ್ದರಿಂದ ಮುಂದೆ ಕಲಿಯುವದು ಬೇಡವೆಂದೇ ನಾನು ನಿರ್ಧರಿಸಿದ್ದೆ.

ಮನೆಯಲ್ಲಿ ಕಾಳಿಕಾದೇವಿಯ ದೇವಸ್ಥಾನ ಇರುವದರಿಂದ ಪ್ರತಿ ಶುಕ್ರವಾರ ಭಜನೆಯಲ್ಲಿ ಮನೆಯವರೆಲ್ಲರೂ ಪಾಲ್ಗೊಳ್ಳುತ್ತಿದ್ದರಿಂದ ನನಗೆ ಸಂಗೀತದಲ್ಲಿ ಬಹಳ ಆಸಕ್ತಿ ಇತ್ತು.

ಅದಕ್ಕಾಗಿ ಈ ಸಂಗೀತವನ್ನೇ ಮುಂದುವರೆಸಿ ಶಿಕ್ಷಣ ಬಿಡಬೇಕೆಂದೇ ನಾನು ಅಂದು ಕೊಂಡಿದ್ದೆ. ಆದರೆ ನನ್ನ ಅಣ್ಣ ತಾನು ಮನೆಯ ನಿರ್ವಹಣೆಯನ್ನು ಹೊತ್ತು ಬಡಗಿತನ ಮಾಡುತ್ತಾ ನನ್ನನ್ನು ಕಲಿಯಲು ಪ್ರೇರೆಪಿಸಿದನು.

ನಿಜ ಹೇಳ ಬೇಕೆಂದರೆ ಆ ಸಮಯದಲ್ಲಿ ಅಣ್ಣನು ಈ ನಿರ್ಧಾರ ಮಾಡಿಲ್ಲದಿದ್ದರೆ ನನ್ನ ಸದ್ಯದ ಜೀವನ ಊಹಿಸಲು ಕಷ್ಟ ಸಾಧ್ಯವೇ ಸರಿ ಎನ್ನಬಹುದು. ಅಂದಿನಿಂದ ಇಂದಿನ ವರೆಗೂ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತಾ ಬಂದಿರುವ ನನ್ನ ಅಣ್ಣನೇ ನನ್ನ ಜೀವನದ ಪ್ರಮುಖ ಗುರುವಾಗಿದ್ದಾನೆ ಎಂದು ಹೇಳಲು ನನಗೆ ಸಂತೋಷವೆನಿಸುತ್ತದೆ.

ಮುಂದೆ ಅವನ ಪ್ರೇರೆಪಣೆಯಿಂದಲೇ ನಾನು ಹೈಸ್ಕೂಲ್ ಶಿಕ್ಷಣವನ್ನು ಆಲಮೇಲದಲ್ಲಿ ಮುಗಿಸಿದೆ. ಈ ಶಾಲೆಯಲ್ಲಿನ ಎಲ್ಲ ಗುರುಗಳ ಆಶೀರ್ವಾದ, ಪ್ರೋತ್ಸಾಹ ದಿಂದ ನಾನು ಹೈಸ್ಕೂಲ್ ಶಿಕ್ಷಣವನ್ನು ಆಲಮೇಲದಲ್ಲಿ ಮುಗಿಸಿದೆ 10 ನೇ. ತರಗತಿಯಲ್ಲಿ ನಮ್ಮೂರಿನಲ್ಲಿಯೇ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎನಿಸಿ ಕೊಂಡೆ. ಹೆಚ್ಚಿನ ವಿದ್ಯಾಭ್ಯಾಸವನ್ನು ಸಿಂದಗಿ ಹಾಗೂ ವಿಜಯಪುರದಲ್ಲಿ ಪಡೆದರು.ಹೀಗೆ ನನ್ನ ಮುಂದಿನ ಶಿಕ್ಷಣವು ಅಣ್ಣನ ಸಹಕಾರದಿಂದ ಮುಂದುವರೆಯಿತು. ಒಂದು ಹಂತದ ವರೆಗೆ ಶಿಕ್ಷಣ ಮುಗಿಸಿದ ಮೇಲೆ ಮುಂದೇನು? ಎಂಬ ಪ್ರಶ್ನೆ ಕಾಡುತ್ತಾ ಇತ್ತು.

ಅಣ್ಣನ ಜೊತೆ ಬಡಗಿತನ ಮಾಡುವುದೇ ಸೂಕ್ತ ಎಂದು ಕೊಂಡಾಗ, ನಮ್ಮ ಕುಟುಂಬದ ಗುರುಗಳಾದ ಶ್ರೀ ಚಿಕ್ಕೇಂದ್ರ ಮಹಾ ಸ್ವಾಮಿಗಳು, ಮೂರುಜಾವದ ಮಠ, ಅಫಜಲಪೂರ ಇವರ ಆಶೀರ್ವಾದವೋ ಎಂಬಂತೆ 1989 ರಲ್ಲಿ KSRTC ಯಲ್ಲಿ ಉದ್ಯೋಗ ದೊರೆಯಿತು.

ಅಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಮುಂದೆ 1996 ರಲ್ಲಿ ಶಿಕ್ಷಕ ವೃತ್ತಿಯು ನನಗೆ ಒಲಿದು ಬಂದಿತು. ಶಿಕ್ಷಕ ವೃತ್ತಿಯಲ್ಲಿದ್ದು ಕೊಂಡೆ ನನ್ನ ಬಾಲ್ಯದ ಹವ್ಯಾಸವಾದ ಸಂಗೀತವನ್ನು ಮುಂದುವರೆಸಲು ಪ್ರೋತ್ಸಾಹ ದೊರೆಯಿತು.

ಶಿಕ್ಷಣ ಇಲಾಖೆಯ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವದು, ಶಿಕ್ಷಣ ಇಲಾಖೆಯು ಶಿಕ್ಷಕರಿಗಾಗಿ ಏರ್ಪಡಿಸುವ ಅನೇಕ ಸಹ ಪಠ್ಯ ಚಟುವಟಿಕೆಯಲ್ಲಿ, ಸಂಗೀತದಲ್ಲಿ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದಿರುವದು, ಮತ್ತು ನನ್ನ ವೃತ್ತಿಗೆ ಪುಷ್ಟಿ ಎಂಬಂತೆ ಶಿಕ್ಷಣ ಇಲಾಖೆಯು 2012 ರಲ್ಲಿ ‘ಜಿಲ್ಲಾ ಮಟ್ಟದ ಅತ್ತ್ಯುತ್ತಮ ಶಿಕ್ಷಕ ‘ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿದ್ದು ಮತ್ತು ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಅನೇಕ ಮಠಧೀಶರು ಗೌರವಿಸಿದ್ದು ನನಗೆ ತೃಪ್ತಿ ತಂದಿತು.ಬಾಲ್ಯದಿಂದಲೂ ಬಡತನವೇ ಕಂಡ ನನಗೆ 30 ವರ್ಷಗಳ ಈ ಸೇವೆ ಮಾಡುತ್ತಿರುವದು ಈ ಶಿಕ್ಷಕ ವೃತ್ತಿಯು ಬದುಕಿನ ನೆಮ್ಮದಿ ಕಾಣುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಹಲವು ವಿದ್ಯಾರ್ಥಿಗಳ ಬಾಳಿನಲ್ಲಿ ನನಗೆ ಗುರುವಿನ ಸ್ಥಾನವಿರುವದು ತೃಪ್ತಿಯ ಜೊತೆಗೆ ಹೆಮ್ಮೆಯೂ ನನಗಿದೆ. ಎಂದು ಅವರ ಸೇವೆಯಿಂದ ನಿವೃತ್ತ ಪಡೆದ ನಂತರ ತಾರಾಪೂರ ಶಾಲೆಯ ಶಿಕ್ಷಕರಿಂದ ಸನ್ಮಾನವನ್ನು ಸ್ವೀಕರಿಸಿದ ನಂತರ ನಮ್ಮ ಸಹಿ ಕಹಿ ಕನ್ನಡ ದಿನ ಪತ್ರಿಕೆ ಜೊತೆ ತಮ್ಮ ಮನದಾಳದ ಮಾತು ಹಂಚಿ ಕೊಂಡರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button