ಕಡು ಭ್ರಷ್ಟಾಚಾರ ವಿರುದ್ಧದ ನೈತಿಕ ಹೋರಾಟ – ತಾತ್ಕಾಲಿಕ ವಾಪಸ್ ಹಿಂಪಡೆಯಲಾಯಿತು.
ಪೋತ್ನಾಳ್ ಜೂ.19

ಸಮೀಪದ ಮಾನವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26-27 ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನ, ಎಸ್‌ಬಿಎಂ ಖಾತೆ ಹಾಗೂ ನಂಬರ್-01 ಖಾತೆಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಉಟಕನೂರು ಗ್ರಾಮ ಪಂಚಾಯತಿ ನಾಗರಿಕರ ವೇದಿಕೆ ಗ್ರಾಮ ಸಭೆ, ವಾರ್ಡ್ ಸಭೆ ಹಾಗೂ ಸಾಮಾನ್ಯ ಸಭೆಗಳನ್ನು ನಡೆಸದೇ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಮುಂದೆ ನಡೆಸುತ್ತಿದ್ದ ಅನಿರ್ದಿಷ್ಟ ಧರಣಿಯನ್ನು ತಾಲೂಕು ಪಂಚಾಯತಿ ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ ತಾತ್ಕಾಲಿಕವಾಗಿ ವಾಪಾಸ್ ಹಿಂಪಡೆಯಲಾಯಿತು.
ಈ ಸಂಬಂಧ ಧರಣಿ ಸ್ಥಳಕ್ಕೆ ಆಗಮಿಸಿದ ಮಾನ್ವಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಹಮದ್ ಅವರು ಹೋರಾಟಗಾರರ ಅಹವಾಲು ಸ್ವೀಕರಿಸಿ ತಮ್ಮ ಬೇಡಿಕೆ ಮೇಲಧಿಕಾರಿಗಳ ಗಮನಕ್ಕೆ ತಂದು ಹದಿನೈದು ದಿನಗಳಲ್ಲಿ ಪರಿಹರಿಸಲು ಪ್ರಯತ್ನ ಮಾಡುವುದಾಗಿ ಲಿಖಿತ ಭರವಸೆ ನೀಡಿದ ಕಾರಣ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕ ವಾಪಾಸ್ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ನೋಡಲ್ ಅಧಿಕಾರಿ ಬಾಲಯ್ಯ ನಾಯಕ, ಪಿಡಿಓ ಜುಬೇರ್ ನಾಯ್ಕ್, ಪಂಚಾಯತಿ ಹಾಗೂ ಪೊಲೀಸ್ ಸಿಬ್ಬಂದಿ, ಉಟಕನೂರು ನಾಗರೀಕ ವೇಧಿಕೆ ಹೋರಾಟಗಾರರಾದ ಮಲ್ಲು ನಾಯಕ ತಡಕಲ್, ಬಸವರಾಜ ಬಾಗಲವಾಡ, ಮಹಾಂತೇಶ ನಾಯಕ ತಡಕಲ್, ಕರ್ನಾಟಕ ಭೀಮ ಸೇನೆ ಮುಖಂಡ ಕಿರಣಕುಮಾರ ಉದ್ಭಾಳ್, ಕನಕಪ್ಪ ಬೆಳವಾಟ, ಮರಿಬಸವ, ಮಂಜುನಾಥ, ಶ್ರೀಶೈಲ, ಶರಬಣ್ಣ ಕುಂಬಾರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

