ಮಗುವಿಗೆ ಸ್ತನ್ಯಪಾನ ಮಾಡಿಸುವದರಿಂದ ತಾಯಿಯಂದಿರಿಗೆ – ಸ್ತನ ಕ್ಯಾನ್ಸರ್ ಮಧುಮೇಹ ದೂರ.

ಅಮೀನಗಡ ಆ.07

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ನಾಗಪ್ಪ ಕಟ್ಟೆ ನವಗ್ರಹ ಮಂದಿರದಲ್ಲಿ *ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ತ್ರೀಶಕ್ತಿ ಗುಂಪಿನ ಸದಸ್ಯರಾದ ಮಂಜುಳಾ ಯರಗೇರಿ ಯಶೋಧಾ ಲಮಾಣಿ, ಗೌರಮ್ಮ ಗೌಡರ, ಪ್ರೀಯಾ ಚಳಿಗೇರಿ ಆರೋಗ್ಯ ಅಧಿಕಾರಿಗಳಾದ ಎಸ್ ಎಸ್ ಅಂಗಡಿ, ಸಿ ಎಸ್ ಕೊಲ್ಕಾರ ಸ್ತನ್ಯಪಾನ ಮಾಹಿತಿ ಕರಪತ್ರ ವಿತರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿವರು ಸ್ತನ್ಯಪಾನ ಪ್ರಾರಂಭಿಸಿ ಶಿಶು ಮರಣ ತಪ್ಪಿಸಿ, ಸುಸ್ತಿರ ಜೀವನ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢ ಗೋಳಿಸೋಣ ಎಂಬ ಘೋಷಗಳೊಂದಿಗೆ, ಮಗು ಜನಸಿದ ಒಂದು ತಾಸಿನೊಳಗೆ ತಾಯಿ ಸ್ತನ್ಯಪಾನ ಮಾಡಿಸ ಬೇಕು. ತಾಯಿ ಮಗು ಬಾಂಧವ್ಯ ವೃದ್ಧಿ, ತಾಯಿ ಎದೆ ಹಾಲು ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತಾಯಿ ಎದೆಹಾಲು ಅಮೃತಕ್ಕೆ ಸಮಾನ ಮಗುವಿಗೆ ಮಾರಕ ರೋಗಗಳ ತಡೆಗೆ ಪ್ರಥಮ ಲಸಿಕೆಯಾಗಿದೆ. ಮಗುವಿಗೆ ಜ್ವರ ಇದ್ದಾಗಲೂ ಹಾಲೂಣಿಸ ಬೇಕು. ಸ್ತನ್ಯಪಾನ ದಿಂದ ತಾಯಿಯಂದಿರಿಗೆ ಸ್ತನ್ಯ ಕ್ಯಾನ್ಸರ್ ಮಧುಮೇಹದಂತ ಕಾಯಿಲೆ ಬರುವುದಿಲ್ಲ. ಆರೋಗ್ಯವಂತ ತಾಯಿ ಆರೋಗ್ಯವಂತ ಮಗು ಪೋಷಕಾಂಶಯುಕ್ತ ಸಮತೋಲನ ಆಹಾರ ಸೇವಿಸಬೇಕು ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ ಎಸ್ ಕೊಲ್ಕಾರವರು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮಾಹಿತಿ ನೀಡಿ ನಿಗದಿತ ಸಮಯದಲ್ಲಿ ಮಗುವಿಗೆ ಎಲ್ಲ ಲಸಿಕೆಗಳನ್ನು ಹಾಕಿಸಲು ತಿಳಿಸಿದರು. ವಿಶ್ವ ಸ್ತನ್ಯಪಾನ ಕಾರ್ಯಕ್ರಮ ಆರೋಗ್ಯ ಜಾಗೃತಿಯಲ್ಲಿ ತಾಯಿಯಂದಿರು ಗರ್ಭಿಣಿಯರು, ಆಶಾ ಕಾರ್ಯಕರ್ತೆಯರು ಪಟ್ಟಣದ ಪ್ರಮುಖರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button