ಶ್ರೀ ಪರಮಾನಂದ ಭೋಗಲಿಂಗೇಶ್ವರ ಸಂಯುಕ್ತ ಶಾಲೆ ಕಡಣಿಯಲ್ಲಿ ಇಂದು – ವ್ಯಸನ ಮುಕ್ತ ಕಾರ್ಯಕ್ರಮ ಜರಗಿತು.

ಆಲಮೇಲ ಆ.07

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪರಮಾನಂದ ಭೋಗಲಿಂಗೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ.ಭೋಗಣ್ಣ ಲಾಳಸಂಗಿ ವಹಿಸಿ ಕೊಂಡಿದ್ದರು. ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಆಲಮೇಲದ ರಾಜಯೋಗಿ ರೇಣುಕಾ ಅಕ್ಕನವರ ನೇತೃತ್ವದಲ್ಲಿ “ವ್ಯಸನ ಮುಕ್ತ ಪ್ರತಿಜ್ಞೆ” “ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಅಲಮೇಲ”

ಸೇವಾ ಕೇಂದ್ರ ಇಂದ 10 ಕೋಟಿ ನಶೇ ಮುಕ್ತ ರಾಗುವ ಪ್ರತಿಜ್ಞೆಗಳು ಮಹಾ ಅಭಿಯಾನಕ್ಕೆ ಮಾದಕ ವಸ್ತು ಮುಕ್ತ ಭಾರತಕ್ಕಾಗಿ 10 ಕೋಟಿ ದೃಢಸಂಕಲ್ಪಗಳಲ್ಲಿ ಅವರು ಭಾಗವಹಿಸಿ ಪ್ರತಿಜ್ಞೆ ಮಾಡಿದ್ದಾರೆ ಬೋಧಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ವ್ಯಸನ ಮುಕ್ತ ಭಾರತವನ್ನಾಗಿಸುವ ಉದ್ದೇಶವನ್ನು ಶ್ರೀ ರೇಣುಕಾ ಅಕ್ಕನವರು ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು.

ನಂತರ ಬಿ.ಸಿ.ಎಂ ವಸತಿ ನಿಲಯದ ಮೇಲ್ವಿಚಾರಕರಾದ ಪ್ರಭಾಕರ ಬಿರಾದಾರ ಸರ್ ಮಾತನಾಡಿ ಈಗಿನ ಮಕ್ಕಳು ನಾಳಿನ ದೇಶದ ಭವಿಷ್ಯ ತಂಬಾಕು ಗುಟ್ಕಾ ಮುಂತಾದ ದುಶ್ಚಟಗಳಿಗೆ ದಾಸರಾಗಬೇಡಿ ಎಂದು ಹೇಳಿದರು.

ಪ್ರಾಚಾರ್ಯರಾದ ರಮೇಶ ಎಸ್ ಗಂಗನಳ್ಳಿ ಸರ್ ಮೊದಲು ನಾವು ದುಶ್ಚಟಗಳಿಂದ ದೂರವಿದ್ದರೆ ಮಾತ್ರ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಲು ಸಾಧ್ಯ ತoಬಾಕು ಗುಟ್ಕಾ ಮದ್ಯಪಾನ ಇಂತಹ ವ್ಯಸನದಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೂ ಮತ್ತು ವೇದಿಕೆಯ ಮೇಲಿನ ಎಲ್ಲಾ ಗಣ್ಯರಿಗೂ ವಿನಂತಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಶ್ರೀ ಪರಮಾನಂದ ಭೋಗಲಿಂಗೇಶ್ವರ ಸಂಯುಕ್ತ ಶಾಲೆಯ ಗುರುಗಳಾದವರು ಪ್ರಾಚಾರ್ಯರಾದ ಆರ್ ಎಸ್ ಗಂಗನಹಳ್ಳಿ ದ್ವಿತೀಯ ದರ್ಜೆ ಸಹಾಯಕರಾದ ಎಸ್ ಆರ್ ಕೊಟ್ಟಲಗಿ ಗಂಗನಹಳ್ಳಿ ಡಿ ಎಮ್ ವೆಂಕಟೇಶ್ ಟಿ ಆರ್ ಬಿ ಚವ್ಹಾಣ ಎಸ್ ಬಿ ಬಡಿಗೇರ್ ಬಿ ಸಿ ಕೆಸರಟ್ಟಿ ಎಲ್ ಬಿ ಲಾಳಸಂಗಿ ಬಿ ಎ ಹಿ ಕುಣ್ಗುತ್ತಿ ಬಿ ಕೆ ಅವಟಿ ಉಪನ್ಯಾಸಕರು ಎಸ್ ಎಂ ಚರಂತಿಮಠ ಜಿ ಕೆ ಮುಜಾವರ ಪಿ ಎ ಕ್ಷತ್ರಿಯ ಎಸ್ ಬಿ ಸುತಾರ್ ಆರ್ ಎಸ್ ಗೋರ್ನಾಳ್ ಶಿಕ್ಷಕಿಯರು ಎಸ್ ಡಿ ತಾವರಗೇರಿ ಶೃತಿ ವಾಯ ಭೋಗಂಡಿ ಶ್ರೀಶೈಲ ಎಮಾಶೆಟ್ಟಿ ಮತ್ತು ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ:ಗಾಲಿಬಸಾಬ್ ನಾಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button