ಜನ ಹಿತಕ್ಕಾಗಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇನೆ – ಕೆ.ಜೆ ಜಾರ್ಜ್.
ತರೀಕೆರೆ ಆ.07


ಚಿಕ್ಕಮಗಳೂರು ಜಿಲ್ಲೆಯ ಇಂದಿರಾ ಗಾಂಧಿಯನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮರು ಜೀವ ಕೊಟ್ಟಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವರು, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್ ಹೇಳಿದರು.
ಅವರು ಇಂದು ಪಟ್ಟಣದ ಕೋರ್ಟು ಹಿಂಭಾಗದಲ್ಲಿ ಪುರಸಭಾ ನೂತನ ಕಚೇರಿ ಕಟ್ಟಡ ಶಂಕು ಸ್ಥಾಪನೆ ಮಾಡಿ ಮಾತನಾಡಿದರು ಅಜ್ಜಂಪುರ ತಾಲೂಕು ಬರ ಪ್ರದೇಶ ವೀಕ್ಷಣೆಗೆ ಬಂದಿದ್ದು ಮಿತ್ರರಾದ ಶಾಸಕ ಜಿಎಚ್ ಶ್ರೀನಿವಾಸ್ ರವರ ಕೋರಿಕೆಯಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತೇನೆ.
ನಾನು 1969 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಆದ್ದರಿಂದ ಕಾರ್ಯಕರ್ತರಿಗೆ ಮತದಾರರಿಗೆ ಗೌರವ ಕೊಡುತ್ತೇನೆ. ಜನ ಹಿತಕ್ಕಾಗಿ,ರೈತರ ಹಿತಕ್ಕಾಗಿ,ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಜಿ ಎಚ್ ಶ್ರೀನಿವಾಸ್ ಪುರಸಭಾ ಕಟ್ಟಡ ಆಗಬೇಕು ಎಂಬ ಕನಸು ನನ್ನದಾಗಿತ್ತು ಅದು ಇಂದು ನೆರವೇರುತಿದೆ ಮಾನ್ಯ ಸಚಿವರು ಶಂಕುಸ್ಥಾಪನೆ ಮಾಡಿದ್ದಾರೆ.ತರೀಕೆರೆ ಕ್ಷೇತ್ರ ಅಭಿವೃದ್ಧಿಗೆ 55,187 ಕೋಟಿ ರೂ ಅನುದಾನ ಸರ್ಕಾರ ನೀಡಿದೆ 10 ಕೋಟಿ ರೂ ಪುರ ಸಭೆಗೆ ನೀಡಲಾಗಿದೆ.

ಒಳ ಚರಂಡಿ ಕಾಮಗಾರಿಗೆ ರೂ 128 ಕೋಟಿ ಮಾರುಕಟ್ಟೆ ಅಭಿವೃದ್ಧಿಗೆ ರೂ 2100 ಕೋಟಿ ನೀಡಲಾಗಿದೆ ಬಸ್ ಸ್ಟ್ಯಾಂಡ್ ಮತ್ತು ತಾಯಿ ಮಗು ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ ಬಿ ಖಾತೆಯಿಂದ ಎ ಖಾತೆ ಮಾಡುವ ಕೆಲಸ ಪ್ರಗತಿಯಲ್ಲಿದೆ ಮಾನ್ಯ ಸಚಿವರು ಕರೆಂಟ್ ಸಮಸ್ಯೆ ಬಗೆಹರಿಸಿ ಹೆಚ್ಚುವರಿ ಲೈನ್ ಮ್ಯಾನ್ ಗಳನ್ನು ಕೊಡಲಿದ್ದಾರೆ, 248 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ರೈತರ ಜೀವ ಉಳಿಸಿ, ರೈತರ ಬಾಳು ಸುಖಕರವಾಗಿರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭದ್ರಾ ಕಾಡ ಅಧ್ಯಕ್ಷರಾದ ಡಾ, ಕೆ.ಪಿ ಅಂಶಮಂತ್ ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಉಪಾಧ್ಯಕ್ಷರಾದ ಶಮೀಮ್ ಬಾನು, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಂಜೇಗೌಡರು, ಜಿಲ್ಲಾ ಅಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೀರ್ತನ ಹೆಚ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಹಾಗೂ ಪುರಸಭಾ ಸದಸ್ಯರು ಮುಖ್ಯ ಅಧಿಕಾರಿ ತಹೇರಾ ತಸ್ನಿಮ್, ತರೀಕೆರೆ ಕಾರ್ಯಪಾಲಕ ಅಭಿಯಂತರರಾದ ಸೋಮಶೇಖರ್ ಮತ್ತು ಗುತ್ತಿಗೆದಾರರಾದ ಹಮ್ಮ್ಜು ಕಾವು ಮೊಹಮ್ಮದ್. ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
