ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತರ ಬದುಕು ಬರಹ ಮತ್ತು – ಸಾಹಿತ್ಯದ ಅರಿವು ಕಾರ್ಯಕ್ರಮ ಜರುಗಿತು.

ಕುಲಕುಂದಿ ಆ.07

ಚಿತ್ತಾಪುರ ತಾಲ್ಲೂಕಿನ ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಲಕುಂದಿ ಗ್ರಾಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೆ.ಶಿವರಾಮ್ ಕಾರಂತರ ಬದುಕು ಬರಹ ಮತ್ತು ಸಾಹಿತ್ಯದ ಅರಿವು ಮೂಡಿಸುವ ಮೂಲಕ ವಿಶೇಷ ಉಪನ್ಯಾಸಕರಾಗಿ ನರಸಪ್ಪ ಚಿನ್ನಾಕಟ್ಟಿ ಗೌರವ ಕಾರ್ಯದರ್ಶಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪುರ ತಾಲ್ಲೂಕು ಹಾಗೂ ಖ್ಯಾತ ಸಾಹಿತಿಗಳಿಂದ ವಿಶೇಷ ಉಪನ್ಯಾಸ ನೀಡಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ‘ಕರಾವಳಿಯ ಕಡಲ ತೀರದ ಭಾರ್ಗವ’ ಎಂದೇ ಖ್ಯಾತರಾದವರು. ಇವರ “ಮೂಕಜ್ಜಿಯ ಕನಸುಗಳು” ಕಾದಂಬರಿಗೆ 1978 ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ಇವರು ವಿಜ್ಞಾನ, ಕಲೆ, ಯಕ್ಷಗಾನ, ಪರಿಸರ ಮತ್ತು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಜನನ ಮತ್ತು ಬಾಲ್ಯ ಜನನ ಅಕ್ಟೋಬರ್ 10, 1902 ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನನ. ಬಾಲ್ಯ ಪ್ರಾಥಮಿಕ ಶಿಕ್ಷಣ ಕೋಟ ಮತ್ತು ಕುಂದಾಪುರದಲ್ಲಿ ನಡೆಯಿತು.

ಸ್ವಾತಂತ್ರ್ಯ ಹೋರಾಟ ಗಾಂಧೀಜಿಯವರ ಪ್ರಭಾವದಿಂದ ಅಸಹಕಾರ ಚಳವಳಿಯಲ್ಲಿ ಭಾಗಿ. ಸಾಹಿತ್ಯ ಕೃಷಿ ಮತ್ತು ಬರಹಗಳು ಕಾದಂಬರಿಗಳು: ಚೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಔಡಣ, ಹುಚ್ಚು ಮನಸ್ಸಿನ ಹತ್ತು ಮುಖಗಳು (ಸ್ವಯಂ ಚರಿತ್ರೆ). ವಿಶೇಷತೆ ಮಾನವ ಸಂಬಂಧಗಳು, ಮೂಢನಂಬಿಕೆಗಳ ವಿರೋಧ ಹಾಗೂ ಸತ್ಯಶೋಧನೆ ಇವರ ಬರಹಗಳ ಮುಖ್ಯ ಹೂರಣ.

ವಿಶ್ವಕೋಶ ಮಕ್ಕಳಿಗಾಗಿ ಮತ್ತು ಸಾಮಾನ್ಯರಿಗಾಗಿ ವಿಜ್ಞಾನ ಹಾಗೂ ಕಲೆ ಕುರಿತು ವಿಶಿಷ್ಟ ವಿಶ್ವಕೋಶಗಳ ರಚನೆ. ಕಲೆ ಮತ್ತು ಸಮಾಜ ಸೇವೆ ಯಕ್ಷಗಾನ ಯಕ್ಷಗಾನ ರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಅದನ್ನು ಉಳಿಸಿ ಬೆಳೆಸಿದರು.

ಪರಿಸರ ಕಾಳಜಿ ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಪರಿಸರ ಸಂರಕ್ಷಣೆಗೆ ಸದಾ ಧ್ವನಿ ಎತ್ತಿದರು. ಪ್ರಶಸ್ತಿಗಳು ಜ್ಞಾನಪೀಠ ಮಾತ್ರವಲ್ಲದೆ ಪದ್ಮಭೂಷಣ (ಹಿಂಪಡೆದರು), ಸಾಹಿತ್ಯ ಅಕಾಡೆಮಿ ಹಾಗೂ ನಾಡೋಜ ಪ್ರಶಸ್ತಿಗಳು ಲಭಿಸಿವೆ ತಿಳಿಸಿದರು. ‌

ಚಿತ್ತಾಪುರ ತಾಲ್ಲೂಕಿನ ಕುಲಕುಂದಿ ಗ್ರಾಮದಲ್ಲಿ ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ, ಶಿವರಾಮ ಕಾರಂತರ ಬದುಕು, ಬರಹ ಮತ್ತು ಸಾಹಿತ್ಯದ ಅರಿವು” ಕಾರ್ಯಕ್ರಮವನ್ನು ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಶಿವಕುಮಾರ್ ಸುಣಗಾರ ಅವರು ತಾಯಿ ಕನ್ನಡಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಹೊರ ತಂದರೆ ದೇಶವು ಸಮೃದ್ಧಿಯತ್ತ ಸಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಅರಿವು ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಯಾಗುತ್ತವೆ,” ಎಂದು ಹೇಳಿದರು. ‌ ‌ ‌ “ಈಗಿನ ಕಾಲದಲ್ಲಿ ಕೆಲವರು ತಮ್ಮನ್ನು ಹೆತ್ತು ಹೊತ್ತ ತಂದೆ-ತಾಯಿಯನ್ನೇ ಮನೆಯಿಂದ ಹೊರಗಿಡುವಂತಹ ಮನೋಭಾವ ಬೆಳೆಸಿ ಕೊಂಡಿದ್ದಾರೆ. ಅದೇ ರೀತಿಯಲ್ಲಿ ಕನ್ನಡ ತಾಯಿಯನ್ನೂ ಶಿಕ್ಷಣ ಮತ್ತು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ.

ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಅತ್ಯಂತ ಅಗತ್ಯವಾಗಿದೆ. ಕನ್ನಡ ಉಳಿದು ಬೆಳೆವುದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು,” ಎಂದು ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಖಾರವಾಗಿ ನುಡಿದರು.

ಇದೇ ಸಂಧರ್ಭದಲ್ಲಿ ಊರಿನ ಪ್ರಮುಖರು ಮತ್ತು ಗೌರವ ಅತಿಥಿಗಳು ಮಲ್ಲುಗೌಡ ಪೋ ಪಾಟೀಲ್ ಕುಲಕುಂದಿ ಸಿದ್ದುಗೌಡ ಕುಲಕುಂದಿ. ನಾಗು ಸಾಹುಕಾರ್. ಮಲ್ಲೇಶಿ ಪೂಜಾರಿ. ಈರಣ್ಣ ಪೂಜಾರಿ. ಸಾಯಿಬಣ್ಣ ವನಬಾ. ಮಹಾದೇವ ಮಡಿವಾಳ. ಹಯ್ಯಾಳ ಪೂಜಾರಿ. ಮೌನೇಶ ಸರ. ಈರಣ್ಣಾ ನೀಲೂರ. ಸತೀಶ ಮೇಂಬರ. ವಿರೇಶ ಹಡಪದ SDMC ಅಧ್ಯಕ್ಷರು ಕುಲಕುಂದಿ. ಬಸ್ಸು ಕಾರಿ. ರವಿ ಮಠದ ನಾಲವಾರ. ಶ್ರೀಧರ ಪತ್ತಾರ ನಾಲವಾರ. ದೇವರಾಜ್ ಪೂಜಾರಿ ನಾಲವಾರ. ಶರಣು ಸಾಹು ಮದರಕಿ. ಉಮೇಶ ಯರಗೋಳ. ಸಂಗೀತಗಾರರು ಶಂಕರ ಹಡಪದ. ತಬಲಾ ವಾದಕರು ಮೌನೇಶ ಶಹಾಪೂರ. ‌

ಕವನ ವಾಚನ ಪ್ರಶಾಂತ ಕುಲಕರ್ಣಿ ಹಾಗೂ ರಶ್ಮಿ ಕುಲಕರ್ಣಿ, ಶಿವಲೀಲಾ ತುನ್ನೂರ. ಸ್ವಾಗತ ಭಾಷಣ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಕಸಾಪ ಸಂಘಟನಾ ಕಾರ್ಯದರ್ಶಿಗಳು ಮಾಡಿದರು.‌ ‌

ಕಾರ್ಯಕ್ರಮ ನಿರೂಪಣೆ ಅರುಣಕುಮಾರ ಸುಣಗಾರ ನಾಲವಾರ. ‌ವಂದನಾರ್ಪಣೆ ಮಲ್ಲಿಕಾರ್ಜುನ ತಳವಾರ ಸುಗೂರ ಎನ್. ಕಸಾಪ ಪ.ಪಂ. ಪ್ರತಿನಿಧಿ, ಸೇರಿದಂತೆ ಈ ಕುಲಕುಂದಿ ಗ್ರಾಮದ ನೂರಾರು ಕನ್ನಡ ಮನಸ್ಸುಗಳು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಿರ್ವಹಿಸಿದರು. ಎಂದು ತಿಳಿಸಲಾಯಿತು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button