ಆಗಸ್ಟ್ 11 ರಂದು ಕಲಬುರಗಿ ಜಿಲ್ಲೆಯಾದ್ಯಂತ – ಕ್ಷೌರದ ಸಲೂನ್‌ಗಳು ತೆರೆಯಲಿವೆ.

ಕಲಬುರಗಿ ಆ.07

ಶ್ರಾವಣ ಮಾಸದ ನಾಗರ ಅಮಾವಾಸ್ಯೆ ಪ್ರಯುಕ್ತ ದಿನಾಂಕ 11-08-2026 ಮಂಗಳವಾರ ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಹಡಪದ (ಕ್ಷೌರಿಕ) ಸಮಾಜ ಮತ್ತು ಸವಿತಾ ಸಮಾಜದ ಎಲ್ಲಾ ಹೇರ್ ಸಲೂನ್ ಹಾಗೂ ಕ್ಷೌರದ ಅಂಗಡಿಗಳು ಒಂದು ದಿನ ಮಾತ್ರ ತೆರೆದಿರಲಿವೆ.

ಈ ಕುರಿತು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ ಸಿ. ಹಡಪದ ಸಣ್ಣೂರ ಹಾಗೂ ಕಲಬುರಗಿ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಶಂಕರ ಕಾಳನೂರು ಅವರು ಜಂಟಿಯಾಗಿ ಪ್ರಕಟಣೆ ನೀಡಿದ್ದಾರೆ.

ಬುಧವಾರ 12-08-2026 ರಂದು ನಾಗರ ಅಮಾವಾಸ್ಯೆ ಶ್ರಾವಣ ಮಾಸದ ಇರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಅನುಕೂಲಕ್ಕಾಗಿ 11-08-2026, ಮಂಗಳವಾರ ಒಂದು ದಿನ ಮಾತ್ರ ಎಲ್ಲಾ ಕ್ಷೌರದ ಅಂಗಡಿಗಳನ್ನು ತೆರೆಯಲು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಹಾಗೂ ಜಿಲ್ಲಾ ಸವಿತಾ ಸಮಾಜ ಅನುಮತಿ ನೀಡಿವೆ.

ಅದರ ನಂತರ ಎಂದಿನಂತೆ ಪ್ರತಿ ಮಂಗಳವಾರ ಹಡಪದ (ಕ್ಷೌರಿಕ) ಸಮಾಜ ಹಾಗೂ ಸವಿತಾ ಸಮಾಜದ ಎಲ್ಲ ಕ್ಷೌರದ ಅಂಗಡಿಗಳು ನಿಯಮಾನುಸಾರ ಬಂದ್ ಮಾಡ ಲಾಗುವುದು. ಸಮಾಜದ ಎಲ್ಲಾ ವೃತ್ತಿಬಾಂಧವರು ಈ ನಿಯಮವನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.

ಶ್ರಾವಣ ಮಾಸದ ವಿಶೇಷ ಆಚರಣೆಗಳ ಹಿನ್ನೆಲೆಯಲ್ಲಿ 11 ಆಗಸ್ಟ್ ಮಂಗಳವಾರ ಎಲ್ಲಾ ಕ್ಷೌರಿಕರು ತಮ್ಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲಿದ್ದು, ಗ್ರಾಹಕರು ಸಹಕರಿಸುವಂತೆ ವಿನಂತಿಸಲಾಗಿದೆ.

ಈ ಪ್ರಕಟಣೆಯನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಮತ್ತು ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪತ್ರಿಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button