ಎರಡನೇ ಸಚಿವ ಸಂಪುಟದಲ್ಲಿ ಉನ್ನತ ಸಚಿವ ಸ್ಥಾನ ಎನ್.ವೈ ಗೋಪಾಲಕೃಷ್ಣ ಅವರಿಗೆ ದೊರೆಯಲಿ ಎಂದು – ಕಾಂಗ್ರೆಸ್ ಮುಖಂಡರ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಮೊಳಕಾಲ್ಮುರು ಜೂ.23

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರ ಪರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಿಷ್ಠಾವಂತ ಪ್ರಮುಖರು ಗಣ್ಯರು ಮಾನ್ಯರು ಏಳು ಭಾರೀ ಶಾಸಕರಾಗಿರುವ ಎನ್.ವೈ ಗೋಪಾಲಕೃಷ್ಣಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ ಎನ್.ವೈ ಗೋಪಾಲಕೃಷ್ಣ ಶಾಸಕರು ಕೂಡ್ಲಿಗಿ ಮತ್ತು ಬಳ್ಳಾರಿಯಲ್ಲಿ ಶಾಸಕರಾಗಿದ್ದಾಗ ವೀರಶೈವ ಲಿಂಗಾಯತ್ ಇವರ ಕುಟುಂಬಗಳಿಗೆ ಆಡಳಿತ ನಡೆಸುವ ಸರ್ಕಾರಗಳಲ್ಲಿ ವೀರಶೈವ ಲಿಂಗಾಯತ ಇವರಿಗೆ ಕೇವಲ ಒಂದು ಅಥವಾ ಎರಡು ಗಂಗಾ ಕಲ್ಯಾಣಗಳು ಮಾತ್ರ ತಾಲೂಕಿಗೆ ಕೊಡುತ್ತಿದ್ದರು ಆದರೆ ತಿಳಿದಿದ್ದು ಒಂದೇ ಗೋಪಾಲಕೃಷ್ಣ ಶಾಸಕರಿಗೆ ಕೂಡ್ಲಿಗಿಯಲ್ಲಿ 58000 ಮತದಾರರು ವೀರಶೈವ ಲಿಂಗಾಯತ ಇದ್ದು ಮತ್ತು ಬಳ್ಳಾರಿಯಲ್ಲಿ ಸಹ ಅತೀ ಹೆಚ್ಚಿನ ಸಂಖ್ಯೆ ವೀರಶೈವ ಲಿಂಗಾಯತ ಇದ್ದು ಒಂದು ಅಥವಾ ಎರಡು ಗಂಗಾ ಕಲ್ಯಾಣ ಕೊಟ್ಟರೆ ಯಾರಿಗೆ ಕೊಡಬೇಕು ಎಂದು ತಿಳಿದು ಸರ್ಕಾರಕ್ಕೆ ಸವಾಲ್ ಹಾಕಿ ಕಾನೂನು ರೀತಿಯಲ್ಲಿ ಬಾಬಾ ಸಾಹೇಬ್ರ ಅಂಬೇಡ್ಕರ್ ಬರೆದಂತಹ ಸಂವಿಧಾನದಲ್ಲಿ ಎಲ್ಲಾ ಧರ್ಮದಲ್ಲಿ ಬಡ ಜನಗಳು ಇರುತ್ತಾರೆ.
ವೀರಶೈವ ಲಿಂಗಾಯತ ಬರೆ ಬಂಗಾರ ಗಟ್ಟಿ ಮಾಡಿಕೊಂಡು ತಿನ್ನೋದಿಲ್ಲ ಎಲ್ಲಿ ನೋಡಿದರೂ ಬರೀ ಬಡವರೇ ಕಾಣುತ್ತಾರೆ ಎಂದು ತಿಳಿದು ಆಡಳಿತ ನಡೆಸುವ ಸರ್ಕಾರಗಳಿಗೆ ಸವಾಲು ಹಾಕಿ ಒಂದು ವರ್ಷಕ್ಕೆ 30 40 ಗಂಗ ಕಲ್ಯಾಣದನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಕೊಂಡು ರೈತರಿಗೆ ಅನುಕೂಲ ಮಾಡಿಕೊಟ್ಟಂತ ಎನ್.ವೈ ಗೋಪಾಲಕೃಷ್ಣ ಇವರಿಗೆ ವೀರಶೈವ ಲಿಂಗಾಯತ್ ಮತದಾರರು ಧ್ವನಿ ಎತ್ತಲು ಉನ್ನತವಾದ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಡ ಏರಲು ಮುಂದಾಗಿದ್ದಾರೆ.
ಕಾರಣ ಕರ್ನಾಟಕ ರಾಜ್ಯದ 65% ಇರುವ ವೀರಶೈವ ಲಿಂಗಾಯತ ಇವರ ಮತಗಳು ಸರ್ಕಾರ ನಡೆಸಲು ಪ್ರಾಮುಖ್ಯತೆ ಆಗಿರುತ್ತವೆ ಆದಕಾರಣ ರಾಜ್ಯದ ಮೂಲೆ ಮೂಲೆಯಲ್ಲಿ ವೀರಶೈವ ಲಿಂಗಾಯತ ಎನ್.ವೈ ಗೋಪಾಲಕೃಷ್ಣ ಶಾಸಕರ ಸಹಾಯಕ್ಕೆ ನಿಲ್ಲುವ ಸೂಚನೆ ಬರುತ್ತದೆ ಕಾರಣ ಪ್ರಾಮಾಣಿಕ ವ್ಯಕ್ತಿ ಧರ್ಮದಿಂದಲೇ ಆಡಳಿತ ನಡೆಸುವಂತಹ ವ್ಯಕ್ತಿ ಎನ್.ವೈ ಹನುಮಂತಪ್ಪ ರ ಕುಟುಂಬ ಅಂದರೆ ದೊಡ್ಡ ಮನೆತನದ ಕುಟುಂಬ ಎನ್.ವೈ ಹನುಮಂತಪ್ಪ ಮೂರು ರಾಜ್ಯದಲ್ಲಿ ರಾಜ್ಯ ನ್ಯಾಯಾಧೀಶರಾಗಿ ಕಾನೂನು ರೀತಿಯಾಗಿ ಕೆಲಸ ಮಾಡಿದಂತ ವ್ಯಕ್ತಿ ಇವರ ತಂದೆ ತಾಯಿಂದಲೂ ಕಾಂಗ್ರೆಸ್ ಪಕ್ಷದಿಂದ ಬಂದಿರ್ತಕ್ಕಂತ ಎನ್.ವೈ ಹನುಮಂತಪ್ಪ ಕುಟುಂಬ ಎನ್.ವೈ ಹನುಮಂತಪ್ಪ ಇವರು ಚಿತ್ರದುರ್ಗ ಜಿಲ್ಲಾ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕಾನೂನಾತ್ಮಕವಾಗಿ ಬಡವರಿಗೆ ಸಾವಿರಾರು ಎಕರೆ ಭೂಮಿ ಇಲ್ಲದಂತ ರೈತರಿಗೆ ಸರ್ಕಾರದ ಆಡಳಿತದಲ್ಲಿ ಸಾವಿರಾರು ಕುಟುಂಬಗಳಿಗೆ ಭೂಮಿ ಮಾಡಿಸಿ ಕೊಟ್ಟಂತ ಎನ್ ವೈ ಹನುಮಂತಪ್ಪ ನವರಿಗೆ ಇಡೀ ಜಿಲ್ಲೆಯ ಮತದಾರರು ಜೈಕಾರ ಹಾಕುತ್ತಾರೆ ಕಾರಣ ಇವು ಯುಗ ಇರವರಿಗೂ ಅವರ ಹೆಸರು ಹೇಳಿ ಬದುಕಲು ಒಂದು ಶಕ್ತಿ ಕೊಟ್ಟಿದ್ದಾರೆ ಅದೇ ರೀತಿಯಾಗಿ ಅವರ ತಮ್ಮನ ಸಹ ಎನ್ ವೈ ಗೋಪಾಲಕೃಷ್ಣ ಶಾಸಕರು ಅಣ್ಣನ ಮಾತಿನಂತೆ ಕಾನೂನು ರೀತಿಯಾಗಿ ಮೂರು ಜಿಲ್ಲೆಯ ಶಾಸಕರಾಗಿ ಸಾವಿರಾರು ಕೋಟಿಗಟ್ಟಲೆ ರೈತರಿಗೆ ಅನುಕೂಲವಾಗುವ ಯೋಜನೆಗಳು ಮೂಲಭೂತ ಸೌಕರ್ಯಗಳು ರಸ್ತೆ ಚೆಕ ಡ್ಯಾಮ್ ಕೆರೆ ನಿರ್ಮಾಣ ಶಿಕ್ಷಣಕ್ಕೆ ಅತಿ ಹೆಚ್ಚು ಹೊತ್ತುಕೊಟ್ಟು ಶಾಲೆ ಬಿಲ್ಡಿಂಗ್ ಗಳು ಈ ಮೂರು ಜಿಲ್ಲೆಗಳಲ್ಲಿ ಹೆಸರು ಮಾಡಿದಂತ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮತದಾರರು ಸಚಿವ ಸ್ಥಾನ ಕೊಡಿಸಲು ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮತ್ತು ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಗೂ ಮತ್ತು ರಾಹುಲ್ ಗಾಂಧಿ ಇವರಿಗೆ ಮೂರು ಜಿಲ್ಲೆಗಳ ಮತದಾರರು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆಅವರಿಗೆ ಉನ್ನತ ಸಚಿವ ಸ್ಥಾನ ನೀಡಲು ಮನವಿ ಮಾಡಿ ಕೊಳ್ಳುತ್ತಾರೆ.

ಬೆಂಗಳೂರು, ಜೂನ್ 22 ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ತೀವ್ರ ಗೊಂಡಿರುವ ನಡುವೆಯೇ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಏಳು ಬಾರಿ ಶಾಸಕರಾಗಿರುವ ಶ್ರೀ ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಒತ್ತಾಯ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷರಾದ B.K Hariprasad ಮತ್ತು ಲೋಕೋಪಯೋಗಿ ಸಚಿವರಾದ Satish Jarkiholi ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ನಿಯೋಗ, ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದೆ.
ರಾಜ್ಯದ ಹಿರಿಯ ಶಾಸಕರಲ್ಲಿ ಒಬ್ಬರಾಗಿರುವ ಗೋಪಾಲಕೃಷ್ಣ ಅವರು ಏಳು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆ, ಜನಪರ ಹೋರಾಟಗಳು ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿ ಕೊಂಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ವಿಜಯನಗರ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪಕ ರಾಜಕೀಯ ಪ್ರಭಾವ ಹೊಂದಿರುವ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಈ ಭಾಗಗಳಿಗೆ ಸರ್ಕಾರದಲ್ಲಿ ಮತ್ತಷ್ಟು ಬಲವಾದ ಪ್ರಾತಿನಿಧ್ಯ ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾರ್ಯಕರ್ತರ ಪ್ರಕಾರ, ಪಕ್ಷದ ನಿಷ್ಠಾವಂತ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡುವ ಸಮಯ ಬಂದಿದ್ದು, ದೀರ್ಘ ರಾಜಕೀಯ ಅನುಭವ, ಆಡಳಿತಾತ್ಮಕ ತಿಳುವಳಿಕೆ ಹಾಗೂ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ಸರ್ಕಾರದ ಕಾರ್ಯ ಕ್ಷಮತೆಗೂ ನೆರವಾಗಲಿದೆ.
ರಾಜ್ಯದ ರಾಜಕೀಯ ವಲಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಎನ್.ವೈ ಗೋಪಾಲಕೃಷ್ಣ ಅವರ ಹೆಸರು ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದ್ದು, ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಸ್ಥಾನಕ್ಕಾಗಿ ತಮ್ಮ ಬೇಡಿಕೆಯನ್ನು ಮತ್ತಷ್ಟು ಬಲವಾಗಿ ಮುಂದಿಟ್ಟಿದ್ದಾರೆ.
“ಅನುಭವಕ್ಕೆ ಗೌರವ – ಅಭಿವೃದ್ಧಿಗೆ ಆದ್ಯತೆ” ಎಂಬ ಸಂದೇಶದೊಂದಿಗೆ ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಕಾಂಗ್ರೆಸ್ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು

