ಪಟ್ಟಣದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ – ಆರವಿಂದ್ರ ಅಂಗಡಿ ಕಠಿಣ ಸಂದೇಶ.

ಆಲಮೇಲ ಜೂ.24

ಮಾದಕ ದ್ರವ್ಯಗಳ ದುಬ್ಬಳಕ್ಕೆ ಹಾಗೂ ಅಕ್ರಮ ಸಾಗಾಣಿಕೆ ತಡೆಗಟ್ಟುವ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಲಮೇಲ ಪೊಲೀಸ್ ಠಾಣೆಯ ವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಲಮೇಲ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಮಾದಕ ವ್ಯಸನದ ದುಷ್ಟರಿಣಾಮಗಳು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಆಲಮೇಲ ಠಾಣೆಯ ಪಿಎಸ್ಐ ಅರವಿಂದ್ ಅಂಗಡಿ ಇತ್ತೀಚಿನ ದಿನಗಳಲ್ಲಿ ಯುವಕರು ಡ್ರಗ್ಸ್ ಗಾಂಜಾ ಸಿಗರೇಟ್ ಹಾಗೂ ಇತರ ಮಾದಕ ವಸ್ತುಗಳ ವ್ಯಸನಕ್ಕೆ ಬಲಿ ಯಾಗುತ್ತಿರುವುದು ಅತಂಕಾರಿ ಬೆಳವಣಿಗೆ ಯಾಗಿದೆ.

ಸಮಾಜವನ್ನು ಈ ಕೆಟ್ಟ ಚಟಗಳಿಂದ ಮುಕ್ತಿ ಗೊಳಿಸಲು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಕೈಜೋಡಿಸಿ ಕಾರ್ಯ ನಿರ್ವಹಿಸ ಬೇಕಾಗಿದೆ ಎಂದು ಕರೆ ನೀಡಿದರು.

ಜಾಗೃತಿ ಜಾಥಾವು ಊರಿನ ಪ್ರಮುಖ ಬೀದಿಗಳ ಮುಖಾಂತರ ಜನ ಜಾಗೃತಿ ಮೂಡಿಸಿದರು ಆಲಮೇಲ ಪಿಎಸ್ಐ ಅರವಿಂದ್ ಅಂಗಡಿ ನೇತೃತ್ವದಿಂದ.

“ವಿದ್ಯಾರ್ಥಿಗಳು ಘೋಷಣೆಯೊಂದಿಗೆ ಮಾದಕ ವಸ್ತುಗಳನ್ನು ನಿಷೇಧಿಸಿ ಜೀವ ಕಾಪಾಡಿ ಎಂಬ ಘೋಷದೊಂದಿಗೆ ಜನ ಜಾಗೃತಿ ಮೂಡಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮಾದಕ ವಸ್ತುಗಳಿಗೆ ಮೊರೆ ಹೋಗುತ್ತಿರುವುದರಿಂದ ತಡೆಗಟ್ಟಲು ಈ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆಲಮೇಲ ಠಾಣೆಯ ಪಿಎಸ್ಐ ಅರವಿಂದ್ ಅಂಗಡಿ .ಸಿಬ್ಬಂದಿ ಪ್ರೊಫೆಷನಲ್ ಪಿಎಸ್ಐ ಅನಿಲ್. ಸಿದ್ರಾಯ ಪಾಟೀಲ. ಎಚ್ ಟಿ ಗೋಡೆಕರ್. ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button