ಶಾಲಾ ಮಿನಿ ಸಂಸತ್ತು ರಚಿಸುವ – ಕಾರ್ಯಕ್ರಮ ಜರಗಿತು.
ಕುಮಸಗಿ ಜೂ.23

ಆಲಮೇಲ ತಾಲೂಕಿನ ಕುಮಸಗಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026/27 ನೇ. ಸಾಲಿನ ವಿದ್ಯಾರ್ಥಿಗಳಿಗೆ ಸಂಸತ್ತು ಚುನಾವಣೆ ಮತದಾನ ಮತ ಎಣಿಕೆ ಕುರಿತು ಪ್ರತೀಕ್ಷಿತ ನಡೆಯಿತು.
ಅಂದರೆ ಶಾಲೆಯಲ್ಲಿ ಮಿನಿ ಸಂಸತ್ತು ರಚಿಸುವ ಕಾರ್ಯಕ್ರಮ ಏರ್ಪಡಾಗಿತ್ತು ಮೊಬೈಲ್ ಮತ ಯಂತ್ರವನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳ ಹೆಸರು ಮತ್ತು ಭಾವಚಿತ್ರ ಸಹಿತ ಮತ ಯಂತ್ರದ ಸಹಾಯದಿಂದ ವಿದ್ಯಾರ್ಥಿಗಳು ಮೊಬೈಲಿನಲ್ಲಿ ಮತದಾನ ಮಾಡುವುದು ಮೊಬೈಲಿನಲ್ಲಿ ಮತ ಎಣಿಕೆ ಮಾಡಿದರೆ ಮಾಡಿದ್ದು ಶಿಕ್ಷಕರು ಮಕ್ಕಳಿಗೆ ಹೊಸ ಅನುಭವ ನೀಡಿತು ಮಿಯ ಮನಸಾರೆ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಬಂದು ಮತದಾನ ಮಾಡಿದ್ದು ಚುನಾವಣೆಯ ನೆನಪು ಮರುಕಳಿಸುವಂತೆ ಮಾಡಿತು.

ವಿದ್ಯಾರ್ಥಿಗಳಿಗೆ ಮೊದಲು ಚುನಾವಣೆ ಜನ ಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ ಮತಯಂತ್ರ ಮತದಾನ ಮತಗಳ ಏಕೆ ತಿರಸ್ಕಾರ ವಾಗುವುದು ಅದರ ಪದ್ಧತಿಗಳೇನು ಮತ ಎಣಿಕೆ ಹಾಗೂ ಅಭ್ಯರ್ಥಿಗಳ ಘೋಷಣೆಗಳ ಕುರಿತು ಸವಿಸ್ತಾರವಾಗಿ ಶಾಲೆಯ ಮುಖ್ಯ ಗುರುಗಳಾದ ಪರಮೇಶ್ವರಯ್ಯ ಹಿರೇಮಠ್ ಹೇಳಿದರು.

ನಂತರ ಚುನಾವಣೆಗೆ ಶಾಲೆಯ ಶಿಕ್ಷಕ ವರ್ಗ ಸಿದ್ಧತೆ ಮಾಡಿಕೊಂಡಿತು ಚುನಾವಣೆಯಲ್ಲಿ ಶಾಲೆಯ ಸಹ ಶಿಕ್ಷಕರಾದ ಶ್ರೀ ಎಸ್ ಎಸ್ ಭಜಂತ್ರಿ ಶ್ರೀ ಎಂ ಜಿ ಮೇಧಿ ಶ್ರೀ ಏನ್ ಬಿ ನಾಯ್ಕೋಡಿ ಶ್ರೀಮತಿ ಸವಿತಾ ಆರ್ ಶ್ರೀ ಶಿವಶರಣಪ್ಪ ಡಾಂಗಿ ಶ್ರೀ ಎಸ್ ಪಿ ತಡಸ್ ಶ್ರೀ ಜಿ ಜಿ ಸಜ್ಜನ್ ಆರ್ ಬಿ ಕುಡುಗನೂರ್ ಶ್ರೀಮತಿ ಪವಿತ್ರ ಎಂ ಕುಮಾರಿ ಪೂಜಿತ ಆರ್ ಟಿ ಅತಿಥಿ ಶಿಕ್ಷಕರಾದ ಪ್ರದೀಪ್ ದೊಡ್ಡಮನಿ ಚನ್ನಬಸು ದೊಡ್ಡಮನಿ ಪ್ರೇಮ ನಾಲ್ಕು ಮಾನ ಭಾಗವಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

