ಸ್ವಾಮಿ ವಿವೇಕಾನಂದರ ಪ್ರಕಾರ ಸ್ವಾತಂತ್ರ್ಯವೆಂದರೆ ಜವಾಬ್ದಾರಿ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಆ.15

ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ ,ಅದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಆವರಣದಲ್ಲಿ 80 ನೇ. ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವು ಲಕ್ಷಾಂತರ ಜನರ-ಮಹಾತ್ಮರ ತ್ಯಾಗ-ಬಲಿದಾನದಿಂದ ಪ್ರಾಪ್ತವಾಗಿರುವಂತದ್ದು ಅದನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ಮರಣೆ ಮಾಡಬೇಕು.

ಜೊತೆಗೆ ದೇಶಕ್ಕಾಗಿ ಪ್ರತಿಯೊಬ್ಬರೂ ಸೇವೆ ಮಾಡುವ ಪಣ ತೊಡಬೇಕು. ಸನಾತನವಾದ ಭಾರತದ ಮಹಿಮೆಯನ್ನು ಪ್ರತಿಯೊಬ್ಬರೂ ಅರಿತು ದೇಶಭಕ್ತಿ-ದೇಶ ಪ್ರೇಮವನ್ನು ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು.

ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆಯ ಮಾಡುವುದರೊಂದಿಗೆ ಭಾರತವನ್ನು ವಿಶ್ವ ಗುರುವಾಗಿಸಲು ಕಾರ್ಯ ಪ್ರವೃತ್ತರಾಗ ಬೇಕು. ಭಾರತದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಯೊಬ್ಬರೂ ಪಣ ತೊಟ್ಟು ನವ ಭಾರತವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಭಾರತಮಾತೆಗೆ ಪೂಜೆ,ಆರತಿ, ವನಜಾಕ್ಷಿ ಮೋಹನ್ ಅವರಿಂದ ದೇಶಭಕ್ತಿ ಗೀತೆಯ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸುಧಾಮಣಿ, ಅಂಬುಜಾ ಶಾಂತಕುಮಾರ್, ರಶ್ಮಿ ವಿನಯ್, ಶ್ರೀಪಾದ್, ವಿದ್ಯಾ, ಪುಷ್ಪಲತಾ, ವಿನೋದ್, ಪ್ರವಲ್ಲಿಕಾ, ಮಾನ್ಯ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button