ಪೋಲಿಯೋ ಲಸಿಕಾ ಕೇಂದಕ್ಕೆ ಮಗು ಕರೆ ತಂದು “ಪಲ್ಸ್ ಪೋಲಿಯೊ ಲಸಿಕೆ – ಹಾಕಿಸಲು ಎಸ್.ಎಸ್ ಅಂಗಡಿ ಕರೆ.
ಅಮೀನಗಡ ಜೂ.27

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬಾಗಲಕೋಟ ಮತ್ತು ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ.
ಪಟ್ಟಣದ ಆಂಜನೇಯ ಹೊಂಡದ ಕಟ್ಟೆಯಲ್ಲಿ “ರಾಷ್ಟ್ರೀಯ ಪಲ್ಸ ಪೋಲಿಯೋ ಅಭಿಯಾನ” ಜನ ಜಾಗೃತಿ ಆಯೋಜಿಸಲಾಗಿತ್ತು. ಪಟ್ಟಣದ ಮುಖಂಡರಾದ, ಗಂಗಪ್ಪ.ಬಿ ಅರಬಿ ಈಶಪ್ಪ, ರಾಮಚಂದ್ರ ನೀಲನೂರು, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿ,ಈರಣ್ಣ ಬೇವಿನಮರದ, ಹನಮಂತಪ್ಪ ಪಲ್ಲಕ್ಕಿ, ಚಂದ್ರು ತಳೇವಾಡ, ಪಲ್ಸ ಪೋಲಿಯೋ ಅಭಿಯಾನ ಜಾಗೃತಿ ಕರಪತ್ರ ಸಾರ್ವಜನಿಕರಿಗೆ ವಿತರಿಸುವ ಮುಖಾಂತರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾ ಜಾಗೃತಿ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಪ್ರತಿ ಬಾರಿ ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲವು, 5 ವರ್ಷ ವಯೋ ಮಾನದ ವರೆಗಿನ ಪ್ರತಿಯೊಂದು ಮಗುವಿಗೆ ತಪ್ಪದೇ ಪಲ್ಸ್ ಪೋಲಿಯೋ ಹನಿ ಲಸಿಕೆ ಹಾಕಿಸಿ ಭಾರತ ಪೋಲಿಯೋ ಮುಕ್ತ ಭಾರತವನ್ನು ಮುಂದುವರಸಿ ಎಂಬ ಘೋಷಣೆಗಳೊಂದಿಗೆ, ಇನ್ನು ಕೆಲವು ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿದ್ದು.

ನಮ್ಮ ದೇಶದ ಮಗುವಿನ ಆರೋಗ್ಯ ದೃಷ್ಟಿಯಿಂದ ಪಲ್ಸ್ ಪೋಲಿಯೋ ಹಾಕಲಾಗುವುದು. ದಿನಾಂಕ:- 28 ಜೂನ್ ರವಿವಾರ ಪೋಲಿಯೋ ಭೂತಗೆ ಮಗು ಕರೆ ತಂದು ಪಲ್ಸ್ ಪೋಲಿಯೋ ಎರಡು ಹನಿಗಳನ್ನು ಹಾಕಿಸಿರಿ.
ಪಲ್ಸ್ ಪೋಲಿಯೋ ಲಸಿಕೆ ಸುರಕ್ಷಿತವಾಗಿದೆ ಯಾವುದೇ ತರಹ ಅಡ್ಡ ಪರಿಣಾಮಗಳಿಲ್ಲ. ಪಟ್ಟಣ ಬೇರೆ ಊರಿಂದ ಮಕ್ಕಳು ಪೋಲಿಯೋ ಲಸಿಕೆ ವಂಚಿತರಾಗದಂತೆ ನೋಡಿ ಕೊಳ್ಳಬೇಕು. “ಸಾರ್ವಜನಿಕರು ಪೋಲಿಯೋ ಅಭಿಯಾನ ಯಶಸ್ವಿಗೆ ಕೈಜೋಡಿಸಿರಿ” ಜ್ವರ ಮತ್ತು ಇನ್ನಿತರ ಕಾರಣವಿದ್ದ ಮಗುವಿಗೆ, ಮನೆ ಮನೆ ಭೇಟಿ ನೀಡಿ ಲಸಿಕಿ ಹಾಕಲಾಗುವುದು ಎಂದರು.
ರಾಷ್ಟ್ರೀಯ ಪಲ್ಸ ಪೋಲಿಯೋ ಜನ ಜಾಗೃತಿ ಅಭಿಯಾನದಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯ ಕರ್ತೆಯರು, ಪಟ್ಟಣದ ಮುಖಂಡರು ಯುವಕರು ಭಾಗವಹಿಸಿದ್ಧರು.

