ರಾಜಾ ರೋಷವಾಗಿ ಅನ್ನಭಾಗ್ಯ – ಪಡಿತರ ಅಕ್ಕಿ ಮಾರಾಟ.

ಸಿರವಾರ ಜೂ.27

ಬಡವರ ಹಸಿವು ನೀಗಿಸಲೆಂದು ಸರ್ಕಾರ ಉಚಿತವಾಗಿ ಅಕ್ಕಿಯನ್ನು ನೀಡುತ್ತಿದ್ದರೆ ಇತ್ತ ಅಂಗಡಿ ಮಾಲಿಕರು ಹಾಡು ಹಗಲೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾರೇಪ್ಪ ನಾಯಕ ತಹಸೀಲ್ದಾರರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ.

ತಾಲೂಕಿನ ಬಲ್ಲಟಗಿ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 76 ಈ ಅಂಗಡಿಯು ಗ್ರಾಮದ ಒಂದೇ ನ್ಯಾಯ ಬೆಲೆ ಅಂಗಡಿ ಯಾಗಿರುವುದರಿಂದ ನಮ್ಮ ಗ್ರಾಮದಲ್ಲಿ ಹೆಚ್ಚಿನ ಜನ ಸಂಖ್ಯೆಯನ್ನು ಹೊಂದಿದ್ದು, ಸದರಿ ನ್ಯಾಯ ಬೆಲೆ ಅಂಗಡಿ ಹೆಚ್ಚಿನ ಮಟ್ಟದ ಅಕ್ಕಿ ವಿತರಣೆ ಸರ್ಕಾರದಿಂದ ಬರುತ್ತದೆ. ಆದರೆ ಸದರಿ ಅಂಗಡಿಯ ಮಾಲೀಕರಾದಂತಹ ಕೆ.ಬಸನಗೌಡ ಇವರು ಜನರಿಗೆ ಸರಿಯಾದ ಮಟ್ಟದಲ್ಲಿ ಗ್ರಾಹಕರಿಗೆ ಅಕ್ಕಿಯನ್ನು ವಿತರಣೆ ಮಾಡುತ್ತಿಲ್ಲ.

ತಮ್ಮ ಗೋಧಾಮಲ್ಲಿ ಅರ್ಧದಷ್ಟು ಅಕ್ಕಿಯನ್ನು ಸ್ಟಾಕ್ ಮಾಡಿಕೊಂಡು ಜನರಿಗೆ ಅಲ್ಪ ಸ್ವಲ್ಪ ಮಟ್ಟದಲ್ಲಿ ಅಕ್ಕಿಯನ್ನು ನೀಡಿ ಉಳಿದ ಅಕ್ಕಿಯನ್ನು ಇವರುಗಳು ಜನರಿಗೆ ಗೊತ್ತಾಗದಂತೆ ಬೇರೆ ಬೇರೆ ಪಟ್ಟಣಗಳಲ್ಲಿನ ಅಂಗಡಿ ಮಾಲೀಕರಿಗೆ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ವಿಡಿಯೋ ದೃಶ್ಯ ಮುಖಾಂತರ ಸೇರಿ ಹಿಡಿದಿದ್ದೆವೆ.

ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 76 ರ ಅಂಗಡಿ ಮಾಲೀಕರಾದ ಕೆ ಬಸನಗೌಡ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡು ಇವರಿಗೆ ನೀಡಿರುವಂತಹ ನ್ಯಾಯ ಬೆಲೆ ಅಂಗಡಿಯ ಪರವಾನಿಗೆಯನ್ನು ರದ್ದು ಪಡಿಸ ಬೇಕೆಂದು ಒತ್ತಾಯಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button