ಗುರುವಾರ ಬೆಳಗ್ಗೆ ದೇವರ ಎತ್ತುಗಳ – ಶೆಡ್ ಗಳ ಉದ್ಘಾಟನೆ.

ಚಳ್ಳಕೆರೆ ಆ.05

ನಗರದ ಹೊರ ವಲಯದ ಜಗಲೂರಜ್ಜನ ದೇವಸ್ಥಾನದ ಸಮೀಪದಲ್ಲಿ ದೇವರ ಎತ್ತುಗಳಿಗಾಗಿ ದೇವರ ಎತ್ತುಗಳ ಸಂರಕ್ಷಣಾ ಸಮಿತಿ, ಶ್ರೀನರಹರಿ ಸೇವಾ ಪ್ರತಿಷ್ಠಾನ, (ರಿ) ನರಹರಿ ನಗರ, ನನ್ನಿವಾಳದ ಕಟ್ಟೆಮನೆಯ ಮುತ್ತಿಗಾರ ದೇವರ ಎತ್ತುಗಳ ಕ್ಷೇಮಾಭಿವೃದ್ಧಿ ಟ್ರಸ್ (ರಿ)ಇವುಗಳ ಸಂಯುಕ್ತಾಶ್ರಯದಲ್ಲಿ ನಿರ್ಮಿಸಿದ ಶೆಡ್ ಗಳನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಪಾನಂದಜೀ, ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಉದ್ಘಾಟಿಸಲಿದ್ದು.

ಮುಖ್ಯ ಅತಿಥಿಗಳಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ, ತಾಲ್ಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ನೇತಾಜಿ ಪ್ರಸನ್ನ, ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಭಾಗವಹಿಸಲಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್ ವಹಿಸಲಿದ್ದು,

ಶ್ರೀರಾಧಾ ಮಾಧವ ಭಜನಾ ಮಂಡಳಿಯಿಂದ ವಿಶೇಷ ಭಜನೆ, ಗೋಪೂಜೆ, ಸುನೀತಾ, ಮಾಕಂಸ್ ಲಕ್ಷ್ಮೀ ಅವರಿಂದ ಪ್ರಾರ್ಥನೆ, ಗೀತಾ ಪ್ರಕಾಶ್ ಅವರಿಂದ ಸ್ವಾಗತ-ಪರಿಚಯ, ಯತೀಶ್ ಎಂ ಸಿದ್ದಾಪುರ ಅವರಿಂದ ಕಾರ್ಯಕ್ರಮದ ನಿರೂಪಣೆ ನಡೆಯಲಿದ್ದು.

ವಿವಿಧ ಸಂಘಟನೆಗಳ ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button