ಸ್ವಾಮಿ ವಿವೇಕಾನಂದರ ಏಕಾಗ್ರತೆ ಮಕ್ಕಳಿಗೆ ಮಾದರಿಯಾಗಬೇಕು – ಡಾ, ಭೂಮಿಕ.
ಚಳ್ಳಕೆರೆ ಆ.05



ಮಕ್ಕಳಿಂದ ಶ್ರೀರಾಮಕೃಷ್ಣರ ನಾಮಸ್ಮರಣೆ…..
ಸ್ವಾಮಿ ವಿವೇಕಾನಂದರು ಏಕಾಗ್ರತೆಯಿಂದ ಮಾಡುವ ಧ್ಯಾನದ ಘಟನೆಯು ಇಂದಿನ ಮಕ್ಕಳಿಗೆ ಆದರ್ಶ ವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ತಿಳಿಸಿದರು.


ಗಾಯತ್ರಿ ಮಂತ್ರ ಪಠಣ…..
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಸ್ವಾಮಿ ವಿವೇಕಾನಂದರ ಜೀವನ-ಸಂದೇಶ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ಡಾ, ಭೂಮಿಕಾ ಅವರಿಂದ ಸ್ವಾಮಿ ವಿವೇಕಾನಂದರ ಜೀವನ-ಸಂದೇಶ ಉಪನ್ಯಾಸ…..
ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗಾಯತ್ರಿ ಮಂತ್ರ ಪಠಣ, ಯತೀಶ್ ಎಂ ಸಿದ್ದಾಪುರ ಅವರಿಂದ ಭಜನೆ, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ ನಡೆಯಿತು.

ಪರಮಹಂಸ ರಾಮಕೃಷ್ಣ ಜಯತು ಜಯತು ಸರ್ವದಾ…..
ತರಗತಿಯಲ್ಲಿ ಈಶ್ವರಮ್ಮ, ರಶ್ಮಿ, ಲಕ್ಷ್ಮೀ, ಯಶಸ್, ವಿವೇಕ, ನಿರಂಜನ್, ಹರ್ಷಿತಾ, ಶುಕ್ತಿಜಾ, ಶಾಂಖಿನ್ ಎಸ್ ಶ್ರೀರಾಮ್, ಹರ್ಷಾ, ಸಾನ್ವಿ, ಕುಸುಮ, ಹರ್ಷಿಕಾ, ಚಿರಾಗ್, ಲಹರಿ, ವಿವಿಕ್ತ, ಚಿರಣ್ಯ, ಚರಣ್ಯ, ಸಹನಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

