ಕುವೆಂಪು ಅವರ ಮೇಲೆ ಸ್ವಾಮಿ ಸಿದ್ದೇಶ್ವರಾನಂದಜೀ ಪ್ರಭಾವ ಅಗಾಧವಾದದ್ದು – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಆ.10

ಗೋವಿಂದ ಗೋವಿಂದ ಅತಿ ಆನಂದ-ಯತೀಶ್ ಎಂ ಸಿದ್ದಾಪುರ ಅವರಿಂದ…..

ಕನ್ನಡದ ರಾಷ್ಟ್ರಕವಿ ಕುವೆಂಪು ಜೀವನ ಮತ್ತು ಅವರ ದಿವ್ಯತ್ರಯರ ಸಾಹಿತ್ಯ ರಚನೆಯ ಮೇಲೆ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಸಿದ್ದೇಶ್ವರಾನಂದಜೀ ಪ್ರಭಾವ ಅಗಾಧವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ರಂಗನಾಥಾನಂದಜೀ ಅವರ ಸ್ಮೃತಿಗಳು” ಹಾಗೂ “ಮಹಾತೀರ್ಥಗಳಲ್ಲಿ ಮಹಾಮಾತೆ” ಎಂಬ ವಿಷಯವಾಗಿ ಪ್ರವಚನ ನೀಡುತ್ತ ಮಾತನಾಡಿದರು.

ಮಹಾತೀರ್ಥ ತೀರ್ಥಗಳಲ್ಲಿ ಮಹಾ ಮಾತೆ ಪ್ರವಚನ…..

“ಅಭಿನವ ವಿವೇಕಾನಂದ” ಎಂಬ ಬಿರುದನ್ನು ಪಡೆದಿದ್ದ ಸ್ವಾಮಿ ರಂಗನಾಥಾನಂದಜೀ ಅವರು ಸ್ವಾಮಿ ವಿವೇಕಾನಂದರನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು ಎಂದು ಹೇಳಿದ ಅವರು ಶ್ರೀಮಾತೆ ಶಾರದಾದೇವಿಯವರ ಬೃಂದಾವನ ಯಾತ್ರೆಯ ವಿಚಾರವಾಗಿ ವಿವರಿಸಿದರು.

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ದಿವ್ಯತ್ರಯರಿಗೆ ಆರತಿ, ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ಗೀತಾ ನಾಗರಾಜ್, ವನಜಾಕ್ಷಿ ಮೋಹನ್, ಅಂಬುಜಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಬಿ.ಸುಮನಾ, ದೇವೇಂದ್ರಪ್ಪ, ಪುಷ್ಪಲತಾ, ಪ್ರವಲ್ಲಿಕಾ, ಸುಧಾಮಣಿ, ಸಿ.ಎಸ್ ಭಾರತಿ, ಡಿ ಕಾವೇರಿ ಸುರೇಶ್, ಗೀತಾ ವೆಂಕಟೇಶ್, ಮಂಜುಳಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button