ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ಮಾಡುವವಳು ತಾಯಿ ಜಗನ್ಮಾತೆ – ಶ್ರೀಮತಿ ಪ್ರೇಮಾ ನಾಗೇಶ್.
ಚಳ್ಳಕೆರೆ ಆ.10

ಸಕಲ ಮಂಗಳಗಳಿಗೂ ಮಂಗಳ ಸ್ವರೂಪಿಣಿ ಯಾದ, ಎಲ್ಲ ಪುರುಷಾರ್ಥಗಳನ್ನು ಈಡೇರಿಸುವ ಸೃಷ್ಟಿ ಸ್ಥಿತಿ ಸಂಹಾರಗಳನ್ನು ಮಾಡುವವಳು ತಾಯಿ ಜಗನ್ಮಾತೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಪ್ರೇಮಾ ಅಭಿಪ್ರಾಯ ಪಟ್ಟರು.
ತತ್ತ್ವಪದದ ಅರ್ಥ ವಿವರಣೆ…..
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಪುಷ್ಪಲತಾ ವಿಜಯ್ ಅವರ ನಿರಂಜನ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಸರ್ವಮಂಗಲ ಮಾಂಗಲ್ಯೇ ಸ್ತೋತ್ರದ ಪಠಣ-ಅರ್ಥ-ವಿವರಣೆ ನೀಡುತ್ತ ಮಾತನಾಡಿದರು.

ತ್ರಿಗುಣಗಳಿಗೆ ಆಶ್ರಯದಾತಳಾಗಿ ಶರಣಾಗತರಾದ ದೀನರನ್ನೂ, ದುಃಖಿಗಳನ್ನೂ ಕಾಪಾಡಿ ಅವರ ದುಃಖ ಸಂಕಟಗಳನ್ನು ಹೋಗಲಾಡಿಸುವವಳು ಜಗನ್ಮಾತೆ ಎಂದು ಅವರು ಹೇಳಿದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ವನಜಾ, ಗೀತಾ ನಾಗರಾಜ್, ಪ್ರಮೀಳಾ ಜಗದೀಶ್ ಅವರಿಂದ ವಿಶೇಷ ಭಜನೆ ನಡೆದರೆ ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಆರತಿ, ಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಸತ್ಸಂಗದಲ್ಲಿ ಪುಷ್ಪಲತಾ ವಿಜಯ್, ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಮಂಗಳಮ್ಮ, ಶೋಭಾ ಜಗದೀಶ್, ಸವಿತಾ ನಟರಾಜ್, ಉಮಾ ಶಿವಕುಮಾರ್, ಸವಿತಾ ತಿಪ್ಪೇರುದ್ರಪ್ಪ, ಅನಂತಮ್ಮ, ಶಿಲ್ಪಾ, ಸತ್ಯಮ್ಮ, ಸರೋಜಾ, ಟಿ.ಎಂ ವಿಜಯಾಗುರು,ಲಕ್ಷ್ಮೀ ಸುರೇಶ್, ವಿಜಯಲಕ್ಷ್ಮೀ, ನಂದಿನಿ, ಸರಸ್ವತಿ ನಾಗರಾಜ್, ಸರಸ್ವತಿ ರಾಜು, ದ್ರಾಕ್ಷಾಯಣಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
