ದುಷ್ಟ ಚಟಗಳಿಂದ ದೂರವಿರಲು – ಸಂಕಲ್ಪ ಮಾಡಿ.
ಆಲಮೇಲ ಆ.10

ದುಷ್ಟ ಚಟಗಳು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಹಾಳು ಮಾಡದೆ, ಅವರ ಕುಟುಂಬ, ಸಮಾಜ, ದೇಶವನ್ನು ಕೂಡ ಸಂಕಷ್ಟಕ್ಕೆ ದೂಡುತ್ತದೆ ಆದ್ದರಿಂದ ಕೆಟ್ಟ ವ್ಯಸನಗಳಿಂದ ದೂರ ಇರುತ್ತೇವೆ ಎಂದು ಸಂಕಲ್ಪ ಮಾಡಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಆಲಮೇಲದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ಹೇಳಿದರು.
ತಾಲೂಕಿನ ದೇವನಗಾಂವ ಗ್ರಾಮದ ಪ್ರಗತಿಪರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ “ದಶಕೋಟಿ ನಶಾ ಮುಕ್ತ ಭಾರತ” ಅಭಿಯಾನ ನಿಮಿತ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪ್ರತಿಜ್ಞಾ ಬೋಧಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು.

ವ್ಯಸನ ಮುಕ್ತ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಮೊದಲು ತಾವು ಯಾವುದೇ ದುಷ್ಟ ಚಟಕ್ಕೆ ಒಳಗಾಗದೆ ತಮ್ಮ ಸುತ್ತಮುತ್ತಲಿನ ಸ್ನೇಹಿತರನ್ನು ಸಮಾಜವನ್ನು ಮಾದಕ ವಸ್ತುಗಳಿಗೆ ಬಲಿಯಾಗದಂತೆ ನೋಡಿಕೊಂಡು ಅದರ ದುಷ್ಪರಿಣಾಮಗಳ ಕುರಿತು ಜಾಗೃತಿಯನ್ನು ಮೂಡಿಸಬೇಕು ಸದೃಢ ಸಮಾಜ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸ ಬೇಕು ಎಂದರು.
ಬಿ.ಕೆ ರಂಗಪ್ಪ ಅಣ್ಣ, ಪಾರ್ವತಿಮಾತಾ, ಪ್ರಗತಿಪರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸುರೇಶ ಗಂಗನಳ್ಳಿ, ಜಿ.ಎಲ್. ಪತ್ತಾರ, ಎಸ್. ಎಸ್. ಬಳುಂಡಗಿ, ಅಶೋಕ ಜಮಾದಾರ, ಎ.ಎಸ್.ಖೇಡಗಿ, ಎ. ಎಂ. ಮರಾಠೆ, ಎಸ್.ಐ. ಹೂಗಾರ, ಎಸ್. ವಿ. ಬಿರಾದಾರ, ಎಸ್ ಎಸ್ ಚೌಹಾಣ, ಎಂ ಬಸವರಾಜ್, ಆರ್ .ಎಲ್ ನಾಯಕ್, ಅಶೋಕ ರಾಥೋಡ್, ಎಸ್ ಎ ಬಿರಾದಾರ, ಸಿ. ಎನ್. ಪೂಜಾರಿ, ದತ್ತಾತ್ರೇಯ ಸೊನ್ನ, ಗಾಲಿಬಸಾಬ್ ನಾಗಾವಿ, ಶಿವಮೂರ್ತಿ ಕಾಟಕರ ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

