ಶ್ರೀರಾಮ ಮಹಾ ವಿಷ್ಣುವಿನ ಅವತಾರ – ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ಆ.17



ಮಾತಾಜೀ ತ್ಯಾಗಮಯೀ ಅವರ ಸಾನಿಧ್ಯದಲ್ಲಿ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು…..
ಮಕ್ಕಳಿಲ್ಲದ ದಶರಥ ಮಹಾರಾಜನಿಗೆ ಪುತ್ರಕಾಮೇಷ್ಠಿ ಯಾಗದ ಮೂಲಕ ಹುಟ್ಟಿದ ಶ್ರೀರಾಮನು ಸಾಕ್ಷಾತ್ ಮಹಾವಿಷ್ಣುವಿನ ಅವತಾರ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ಡಾ, ಭೂಮಿಕ ನೇತೃತ್ವದಲ್ಲಿ ಮಕ್ಕಳಿಂದ ದೀಪ್ತ ನಯನಾರವಿಂದಂ…..
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮದ್ ರಾಮಾಯಣ”ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಪ್ರವಲ್ಲಿಕಾ ಮತ್ತು ಡಾ, ಭೂಮಿಕ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ , ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ಮತ್ತು ಗಾಯತ್ರಿ ಮಂತ್ರ ಪಠಣ, ಭಜನೆ, ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು, ಪ್ರಸಾದ ವಿನಿಯೋಗ ನಡೆಯಿತು.

ವಿವೇಕಾನಂದರ ಭಜಿಸೋಣ…..
ತರಗತಿಯಲ್ಲಿ ಸಂತೋಷ್, ಲಕ್ಷ್ಮೀ, ಯಶಸ್, ಚರಣ್ಯ, ಯಶಸ್ವಿ, ಪವನಕಲ್ಯಾಣ್, ಯಶಸ್ವಿನಿ, ತನುಜಾ, ಧ್ರುವನಾರಾಯಣ್, ನಿಖಿಲೇಶ್, ಚಿರಾಗ್, ನಿಹಾರಿಕಾ, ಹರ್ಷಿಕಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
