ಹೈದ್ರಾಬಾದ್ ಕರ್ನಾಟಕ ಅಂತ ಹೇಳದು ಬಿಟ್ಟು ಆಂಧ್ರ ಅಂತ ಹೇಳಿದೆ ಅಷ್ಟಕ್ಕೆ – ತಪ್ಪಾಗಿದೆ ಕ್ಷಮಿಸಿರಿ ಮಾಧ್ಯಮದವರೇ ಎಂದ ಶಾಸಕರು.
ಮೊಳಕಾಲ್ಮೂರು ಆ.17



ಮೊಳಕಾಲ್ಮೂರು ಕ್ಷೇತ್ರದ ಕುರಿತು ನಾನು ಮಾತನಾಡಿದ ಮಾತನ್ನು ಸಂಪೂರ್ಣವಾಗಿ ಅರ್ಥಮಾಡಿ ಕೊಳ್ಳದೆ ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ.
ನಮ್ಮ ಕ್ಷೇತ್ರದ ಪಕ್ಕದ ಆಂಧ್ರ ಪ್ರದೇಶಕ್ಕೆ ಹೊಂದಿ ಕೊಂಡಿರುವ ಬೈರು ತಿಪ್ಪೇ ಡ್ಯಾಮ್ ಗೆ ವೇದಾವತಿ ನದಿ ನೀರು ಮತ್ತು ಮಾರಿ ಕಣಿವೆ ಡ್ಯಾಮಿನಿಂದ ಹರಿದು ಬರುವ ನೀರು ಆ ನದಿ ನೀರನ್ನು ಚಳ್ಳಕೆರೆ ಪಕ್ಕದ ತಳಕು ಹೋಬಳಿಗೆ ಸುಮಾರು 50 60 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಆದರೆ ಚೆನ್ನಾಗಿ ಇರುತ್ತಿತ್ತು ಎಂದು ತಿಳಿದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನಾನು ಮನಸ್ಸು ಮಾಡಿದ್ದೇನೆ.
ಕಾರಣ ಮೊಳಕಾಲ್ಮೂರು ಗಡಿ ಭಾಗ ಆಂಧ್ರ ಇದ್ದು ಆ ಆಂಧ್ರ ಪಕ್ಕಕ್ಕೆ ತಳಕು ಹೋಬಳಿ ಬರುತ್ತಿದೆ ಆದಕಾರಣ ಆ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ಆಂಧ್ರ ಅಂತ ನಾನು ಹೇಳಿದ್ದೆ ಅದನ್ನ ಮಾಧ್ಯಮದವರು ಪತ್ರಿಕೆಯವರು ತಪ್ಪಾಗಿ ತಿಳಿದು ಕೊಳ್ಳಬಾರದು ಕಾರಣ ಇಷ್ಟೇ ನನ್ನ ತಾಲೂಕಿನ ಮತದಾರರಿಗೆ ರೈತರಿಗೆ ಪ್ರಾಣಿ ಪಕ್ಷಿಗಳಿಗೆ ದನಕರುಗಳಿಗೆ ನೀರಿನ ದಾಹ ನೀಗಿಸಲು ಪ್ರಯತ್ನ ಮಾಡಿ ಕೆರೆಗಳಿಗೆ ನೀರಿನ ಸೌಲಭ್ಯ ದೊರಕಿಸಲು ನಾನು ಮುಂದಾಗಿದ್ದೇನೆ.
ಸಾರ್ವಜನಿಕರ ಬಲ ನನಗೆ ಬೇಕಾಗಿದೆ ನನ್ನ ಮೊಣಕಾಲ್ಮೂರು ಕ್ಷೇತ್ರದ ಜನರಿಗೆ ಎಚ್.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ಅನುದಾನವನ್ನು ತಂದು ಯಾವ ಮೂಲೆಯಿಂದ ಆದರೂ ಆಂಧ್ರಕ್ಕೆ ಹೋಗುವ ನೀರನ್ನು ಹಿನ್ನಿರಿನಿಂದ ಯೋಜನೆ ರೂಪಿಸಿ ಪೈಪ್ ಲೈನ್ ಮುಖಾಂತರ ನೀರು ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಎನ್.ವೈ ಗೋಪಾಲಕೃಷ್ಣ ಶಾಸಕರು ತಿಳಿಸಿದರು.
ಒಂದೇ ಮಾತಿಗೆ ತಪ್ಪಾಗಿದೆ ಎಂದು ಮೊದಲು ಮಾಧ್ಯಮ ಪತ್ರಿಕೆಯವರ ಕ್ಷಮೆ ಕೇಳಿದ ಶಾಸಕರು ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂದು ಅರ್ಥ ಮಾಡಿಕೊಂಡು ಸ್ವಲ್ಪ ಚುಕ್ಕೆ ಮಾತು ಗೋಸ್ಕರ ಎಚ್ಚರಿಸಿ ಕೊಂಡು ಕ್ಷಮೆಯಾಸಿದ ಶಾಸಕರು ಮತ್ತು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅದೇ ರೀತಿ ವಿಜಯನಗರ ಜಿಲ್ಲೆಯಲ್ಲಿ ನಾನು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಜಾರಿಗೆ ತರಲು ಸಾಕಷ್ಟು ಪ್ರಯತ್ನಿಸಿದ್ದೇನೆ.
ಈ ಎರಡೂ ಪ್ರದೇಶಗಳ ನಡುವೆ ಇರುವ ಮೊಳಕಾಲ್ಮೂರು ತಾಲೂಕಿಗೂ ವಿಶೇಷ ಪ್ಯಾಕೇಜ್ ನೀಡಿ, ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸರ್ಕಾರದ ಗಮನಕ್ಕೆ ತಂದಿದ್ದೇನೆ.
ಆದರೆ ಇದನ್ನು “ಮೊಳಕಾಲ್ಮೂರನ್ನು ಆಂಧ್ರ ಪ್ರದೇಶಕ್ಕೆ ಸೇರಿಸಬೇಕು” ಎಂದು ಬಿಂಬಿಸಿರುವುದು ಸಂಪೂರ್ಣ ತಪ್ಪು ಅರ್ಥೈಸುವಿಕೆ ಯಾಗಿದೆ.
ನನ್ನ ಮಾತಿನ ಉದ್ದೇಶ ಒಂದೇ ಮೊಳಕಾಲ್ಮೂರು ಕ್ಷೇತ್ರಕ್ಕೆ ನ್ಯಾಯಯುತವಾಗಿ ಹೆಚ್ಚಿನ ನೀರಾವರಿ ಸೌಲಭ್ಯ ಮತ್ತು ವಿಶೇಷ ಅಭಿವೃದ್ಧಿ ಪ್ಯಾಕೇಜ್ ದೊರೆಯಬೇಕು.
ಮಾಧ್ಯಮ ಮಿತ್ರರು ಹೇಳಿಕೆಯ ಸಂಪೂರ್ಣ ಸಂದರ್ಭವನ್ನು ಅರ್ಥ ಮಾಡಿಕೊಂಡು ವಾಸ್ತವಾಂಶವನ್ನು ಜನರಿಗೆ ತಿಳಿಸುವಂತೆ ಮನವಿ.
— ಎನ್. ವೈ ಗೋಪಾಲಕೃಷ್ಣಶಾಸಕರು, ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು
