ಶ್ರೀರಾಮನ ತೀಕ್ಷ್ಣತೆ ಮತ್ತು ಸಾಹಸ ಪ್ರವೃತ್ತಿ ಮಕ್ಕಳಿಗೆ ಆದರ್ಶವಾಗ ಬೇಕು – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಸೆ.21

ಶ್ರೀರಾಮಚಂದ್ರನು ದಂಡಕ ವನದಲ್ಲಿ ರಾಕ್ಷಸಿ ತಾಟಕೀಯನ್ನು ಸಂಹರಿಸಲು ತೋರಿಸಿದ ತೀಕ್ಷ್ಣತೆ ಮತ್ತು ಸಾಹಸ ಪ್ರವೃತ್ತಿ ಇಂದಿನ ಮಕ್ಕಳಿಗೆ ಆದರ್ಶ ಪ್ರಾಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಮದ್ ರಾಮಾಯಣ” ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ಕುಮಾರಿ ಪ್ರವಲ್ಲಿಕಾ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ಮತ್ತು ಗಾಯತ್ರಿ ಮಂತ್ರ ಪಠಣ, ಶ್ರೀಮದ್ ಭಗವದ್ಗೀತೆಯ ಭಕ್ತಿ ಯೋಗದ ಶ್ಲೋಕಗಳ ಕಲಿಕೆ, ಮಾನ್ಯ ಅವರಿಂದ ಭಜನೆ,
ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ ನಡೆಯಿತು.
ತರಗತಿಯಲ್ಲಿ ಲಕ್ಷ್ಮೀ, ಯಶಸ್ವಿ, ಕುಸುಮ, ಹರ್ಷಿಕಾ, ಚಿರಾಗ್, ನಿಹಾರಿಕಾ, ಹರ್ಷಿತಾ, ವಿನತಿ, ಶ್ರೇಯಸ್, ಆರಾಧ್ಯ, ಶ್ರೇಯೋದಿತಾ, ಯಶಸ್ವಿನಿ, ಅವಂತಿಕಾ, ಭಾವನಾ, ಚರಣ್ಯ, ಸಹನಾ, ಭುವನ ಭಂಡಾರಿ, ತನುಜಾ, ಪವನ ಕಲ್ಯಾಣ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

