🚨 ಬ್ರೇಕಿಂಗ್ ನ್ಯೂಸ್ | BREAKING NEWS 🚨ಹಗಲು ದರೋಡೆ! ಖಾಸಗಿ ಜಾಗಕ್ಕೆ ಸರ್ಕಾರಿ ಹಣ, ಕುಂದಾಪುರದಲ್ಲಿ ಕೋಟ್ಯಂತರ ರೂ. ಅನುದಾನ ದುರ್ಬಳಕೆಗೆ ಯತ್ನ..! ಇಡೀ ರಾಜ್ಯವೇ – ಬೆಚ್ಚಿ ಬೀಳಿಸುವ ‘ಇಂಟರ್‌ಲಾಕ್’ ಹಗರಣ..?
ಉಡುಪಿ/ಕುಂದಾಪುರ ಡಿ.12

ರಾಜ್ಯದಲ್ಲಿ ಸರ್ಕಾರಿ ಹಣದ ದುರ್ಬಳಕೆ ಮತ್ತು ಭ್ರಷ್ಟಾಚಾರದ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕುಂದಾಪುರ ಪುರಸಭೆ (Kundapura Town Municipality) ವ್ಯಾಪ್ತಿಯಲ್ಲಿ ಇಡೀ ಜಿಲ್ಲೆ ಮತ್ತು ರಾಜ್ಯವೇ ಬೆಚ್ಚಿ ಬೀಳುವಂತಹ ಗಂಭೀರ ಹಣಕಾಸು ಅಕ್ರಮವೊಂದು ಬೆಳಕಿಗೆ ಬಂದಿದೆ.
ಖಾಸಗಿ ಸ್ಥಳಕ್ಕೆ ಸರ್ಕಾರಿ ಅನುದಾನದ ಲೂಟಿ..!
ಪುರ ಸಭೆಯು ಕುಂದಾಪುರದ ಮದುಗುಡ್ಡೆ ರಸ್ತೆಯ ಬಳಿ, ಕಾನ್ವೆಂಟ್ ಶಾಲೆಯ ಹತ್ತಿರವಿರುವ ಸಂಪೂರ್ಣ ಖಾಸಗಿ ಒಡೆತನದ ಸ್ಥಳದಲ್ಲಿ (Private Property) ಇಂಟರ್‌ಲಾಕ್ ಅಳವಡಿಕೆ (Interlock Installation) ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆಸಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಈ ಸ್ಥಳದಲ್ಲಿ ಕೇವಲ ಐದಾರು ಮನೆಗಳಿದ್ದು, ಇದು ಕೇವಲ ಆ ಮನೆಯವರಿಗೆ ಮಾತ್ರ ಬಳಕೆಯಾಗುವ ರಸ್ತೆಯಾಗಿದೆ. ನಿಯಮಗಳ ಪ್ರಕಾರ, ಯಾವುದೇ ಖಾಸಗಿ ಸ್ಥಳದಲ್ಲಿ ಸರ್ಕಾರಿ ಅನುದಾನ ಬಳಸುವ ಮೊದಲು, ಆ ಸ್ಥಳದ ಮಾಲೀಕರು ಆ ರಸ್ತೆಯನ್ನು ಪುರ ಸಭೆಗೆ ಅಥವಾ ಸರ್ಕಾರಕ್ಕೆ ಕಾನೂನು ಬದ್ಧವಾಗಿ ನೋಂದಾಯಿತ ದಾನ ಪತ್ರದ (Registered Gift Deed) ಮೂಲಕ ಹಸ್ತಾಂತರಿಸ ಬೇಕು. ಆದರೆ, ಈ ಐದಾರು ಮನೆಗಳ ಮಾಲೀಕರು ಈವರೆಗೆ ಯಾವುದೇ ದಾನ ಪತ್ರವನ್ನು ನೀಡಿಲ್ಲ. ಹಾಗಾಗಿ, ಈ ಸ್ಥಳವು ಶೇ. 100 ರಷ್ಟು ಖಾಸಗಿಯೇ ಆಗಿದೆ.
ಜಿಲ್ಲಾಧಿಕಾರಿಗಳ ಎದುರೇ ಮುಖ್ಯಾಧಿಕಾರಿಗೆ ಧಿಕ್ಕಾರ..!

ಈ ಗಂಭೀರ ನಿಯಮ ಉಲ್ಲಂಘನೆಯನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ನಿನ್ನೆ (ಗುರುವಾರ) ಪುರ ಸಭಾ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ (Public Grievance Redressal Program) ಹಾಜರಿದ್ದ ಜಿಲ್ಲಾಧಿಕಾರಿ (Deputy Commissioner – DC) ಹಾಗೂ ಆಡಳಿತಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಯವರು, ಈ ಅಕ್ರಮಕ್ಕೆ ತಕ್ಷಣ ಕಡಿವಾಣ ಹಾಕಲು ಕಠಿಣ ನಿರ್ದೇಶನ ನೀಡಿದ್ದು, ಕುಂದಾಪುರ ಪುರ ಸಭಾ ಮುಖ್ಯಾಧಿಕಾರಿ ಆನಂದ ಜೆ ಅವರಿಗೆ “ಕಾನೂನು ಚೌಕಟ್ಟಿನಲ್ಲಿ ಮಾತ್ರ ಕೆಲಸ ಮಾಡಿ” ಎಂದು ಸ್ಪಷ್ಟವಾಗಿ ಆದೇಶಿಸಿದ್ದಾರೆ.
ಪುರಸಭೆ ಅಧಿಕಾರಿಗಳಿಗೆ ನೇರ ಎಚ್ಚರಿಕೆ:-
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನೊಂದ ಮದುಗುಡ್ಡೆ ನಿವಾಸಿಗಳು, “ನೋಂದಾಯಿತ ದಾನ ಪತ್ರ ಪಡೆಯದೆ ಸರ್ಕಾರಿ ಹಣವನ್ನು ಖಾಸಗಿ ಜಾಗಕ್ಕೆ ಬಳಸಿದರೆ, ಇದು ಸರ್ಕಾರಿ ಅನುದಾನದ ಸಂಪೂರ್ಣ ದುರ್ಬಳಕೆ ಮತ್ತು ನಾಗರಿಕರಿಗೆ ದ್ರೋಹ ಮಾಡಿದಂತೆ ಆಗುತ್ತದೆ” ಎಂದು ಗುಡುಗಿದ್ದಾರೆ.
“ಒಂದು ವೇಳೆ ಜಿಲ್ಲಾಧಿಕಾರಿಗಳ ಆದೇಶವನ್ನೂ ಮೀರಿ, ನೋಂದಾಯಿತ ದಾನ ಪತ್ರ ಪಡೆಯದೆ ಪುರ ಸಭೆಯು ಕಾಮಗಾರಿ ಆರಂಭಿಸಿದರೆ, ಕುಂದಾಪುರ ಪುರ ಸಭಾ ಮುಖ್ಯಾಧಿಕಾರಿ ಆನಂದ ಜೆ ಮತ್ತು ಇಂಜಿನಿಯರ್ ಮೇಘನಾ ವಿರುದ್ಧ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ದೂರು ನೀಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ನಿವಾಸಿಗಳು ತಮ್ಮ ದೂರಿನಲ್ಲಿ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಬೆಳವಣಿಗೆ ಇಡೀ ಕುಂದಾಪುರ ಪುರ ಸಭೆಯ ಆಡಳಿತದ ಪಾರದರ್ಶಕತೆ ಮತ್ತು ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಹಗರಣದ ಹಿಂದೆ ಯಾರ ಕೈವಾಡವಿದೆ..? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಮುಂದೇನು..?
ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿರುವುದರಿಂದ, ಪುರ ಸಭೆಯು ನೋಂದಾಯಿತ ದಾನ ಪತ್ರವನ್ನು ಪಡೆದು ಕಾಮಗಾರಿಯನ್ನು ಮುಂದುವರೆಸುವುದೇ..? ಅಥವಾ ಈ ಅನುಮಾನಾಸ್ಪದ ಕಾಮಗಾರಿಯನ್ನು ಸಂಪೂರ್ಣವಾಗಿ ರದ್ದು ಗೊಳಿಸುವುದೇ..? ಎಂಬ ಬಗ್ಗೆ ಪುರ ಸಭೆಯ ಮುಂದಿನ ಕ್ರಮಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ

