ಭಗವಂತನಿಗೆ ಸಮರ್ಪಿತವಾದ ಅಧಿಕ ಫಲ ಪಡೆಯುವ – ಮಾಸ ಅಧಿಕ ಮಾಸ ಪೂಜ್ಯ ವೈ.ರಾಜಾರಾಮ್ ಗುರುಗಳು.

ಚಳ್ಳಕೆರೆ ಜೂ.08

ದಿವ್ಯತ್ರಯರು ಮತ್ತು ಭಗವಾನ್ ಶ್ರೀಕೃಷ್ಣನಿಗೆ ಅಂದ-ಚೆಂದದ ಅಲಂಕಾರ 🏵️🌹

ಜ್ಯೇಷ್ಠ ಅಧಿಕ ಮಾಸವು ಭಗವಂತನಿಗೆ ‌ಸಮರ್ಪಿತವಾದ ಆಧ್ಯಾತ್ಮಿಕ ಸಾಧನೆಗಳಿಗೆ ಅಧಿಕವಾದ ಫಲ ಪಡೆಯುವ ಕಾಲ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಅಧಿಕ ಮಾಸ” ದ ಪ್ರಯುಕ್ತ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಜನೆ ನಡೆಸಿ ಕೊಟ್ಟ ಅವರು “ಅಧಿಕ ಮಾಸದ ವೈಶಿಷ್ಟ್ಯ”ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡುತ್ತಿದ್ದರು.

ಅಧಿಕ ಮಾಸವು 33 ದಿನಗಳ ಕಾಲ ಇರುತ್ತದೆ. ಈ ಮಾಸದಲ್ಲಿ ಹೆಚ್ಚು ಹೆಚ್ಚು ಯಾಜ್ಞ, ದಾನ, ತಪಸ್ಸು, ಸತ್ಕರ್ಮಗಳನ್ನು ಮಾಡುವುದರಿಂದ ಅಧಿಕವಾದ ಫಲವನ್ನು ಪಡೆಯಬಹುದು ಎಂದು ತಿಳಿಸಿದ ಅವರು “ವಟ ಸಾವಿತ್ರಿ ಸತ್ಯವಾನ್” ಕಥೆಯನ್ನು ಹೇಳಿ ಆಕೆಯ ಪಾತಿವ್ರತ್ಯದ ಮಹಿಮೆಯನ್ನು ವಿವರಿಸಿದರು.

ಅಧಿಕ ಮಾಸದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಶ್ರೀಮತಿ ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ಗೀತಾ ಪ್ರಕಾಶ್, ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ ಅವರ ವಿಶೇಷ ಭಜನೆಗೆ ಶ್ರೀನಿವಾಸ ಅವರು ಡೊಲಕ್ ಸಾಥ್ ನೀಡಿದರು.

ಕುಮಾರಿ ಆರ್ ಕೀರ್ತನ ಅವರಿಂದ ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಮೊದಲ ಹತ್ತು ಶ್ಲೋಕಗಳ ಪಠಣ ನಡೆದರೆ ಸತ್ಸಂಗದ ಸ್ವಾಗತ-ಪರಿಚಯವನ್ನು ಶೋಭಾ ರಮೇಶ್ ನಡೆಸಿಕೊಟ್ಟರೆ ಯತೀಶ್ ಎಂ ಸಿದ್ದಾಪುರ ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಗೀತಾ ಪ್ರಕಾಶ್ ಮಾಡಿದರು.

ವಿಶೇಷ ಸತ್ಸಂಗ ಸಭೆಯಲ್ಲಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ, ಜಯಲಕ್ಷ್ಮೀ ತಿಪ್ಪಾರೆಡ್ಡಿ, ಗೀತಾ ಸತ್ಯನಾರಾಯಣರೆಡ್ಡಿ, ಸರಸ್ವತಮ್ಮ, ಗೋವಿಂದರಾಜು, ಹೃತಿಕ್, ತಿಪ್ಪಮ್ಮ, ಜಯಮ್ಮ, ಶುಭಾ, ಪ್ರೇಮಾ, ಅನುಸೂಯ, ರಾಘವೇಂದ್ರ, ಜಿ.ಯಶೋಧಾ, ಶಾಂತಮ್ಮ, ಎಂ ಲಕ್ಷ್ಮೀದೇವಮ್ಮ, ಕವಿತಾ, ಅಂಬುಜಾ, ಸುನೀತಾ, ಸರಸ್ವತಿ ರಾಜು, ವಿಶಾಲಾಕ್ಷಿ, ಸೌಮ್ಯ, ಸಂಗೀತ, ವಿಜಯಾಗುರು, ಪ್ರೇಮಲೀಲಾ, ದ್ರಾಕ್ಷಾಯಣಿ, ಮಮತಾ, ಗೀತಾ ವೆಂಕಟೇಶ್, ಅಂಬಿಕಾ ಪರಮೇಶ್ವರ್, ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button