ವಿಶ್ವ ಪರಿಸರ ದಿನಾಚರಣೆ – ಕಾರ್ಯಕ್ರಮ ಜರಗಿತು.
ದಾವಣಗೆರೆ ಜೂ.06

ಇಂದು ದಾವಣಗೆರೆ ತಾಲೂಕ ಪಂಚಾಯಿತಿ ಅವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಯಾದ ರಾಮ್ ಬೋವಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಲಲಿತ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗ ಮತ್ತು ಗ್ರಾಮ್ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮೌಲಾನಾಯಕ್ ಸದಸ್ಯರಾದ ವೀರೇಶ್ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಉಮೇಶ್ ನಾಯಕ್ ಅವರು ಭಾಗವಹಿಸಿ ಎಂದು ಪರಿಸರ ಗೀತೆಯನ್ನು ಹಾಡಿದರು ಶಾಲಾ ವಿದ್ಯಾರ್ಥಿಗಳು ಪರಿಸರವನ್ನು ಕುರಿತು ಮಾತನಾಡಿದರು.
ಈ ಸಭೆಯನ್ನು ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮುಂದಿನ ದಿನಗಳಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಬಗ್ಗೆ ಮಾತನಾಡಿದರು ಎಂದು ವರದಿಯಾಗಿದೆ.

