🚨BREAKING NEWS🚨 ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ – ಭಗೀರಥ ಪ್ರಯತ್ನಕ್ಕೆ ಸಂದ ಜಯ..!

ಉಡುಪಿ/ಕುಂದಾಪುರ ಜೂ.06

ಗ್ರಾಮೀಣ ಭಾಗದ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಕಟಿಬದ್ಧವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ವಡ್ಡರ್ಸೆಯ ಸುಪ್ರಸಿದ್ಧ “ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ” ಸಮಗ್ರ ಅಭಿವೃದ್ಧಿಗೆ ಮುಜರಾಯಿ ಇಲಾಖೆಯ ಸಚಿವರಾದ “ರಾಮಲಿಂಗ ರೆಡ್ಡಿ” ಅವರು ಭರ್ಜರಿ “₹5 ಲಕ್ಷ ರೂಪಾಯಿಗಳ ಅನುದಾನವನ್ನು” ಬಿಡುಗಡೆ ಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

📌 ಪ್ರಮುಖ ಮುಖ್ಯಾಂಶಗಳು:-

ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು:-

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕರಾದ.

ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ:-

ಅವರು ಕ್ಷೇತ್ರದ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮುಜರಾಯಿ ಸಚಿವರಿಗೆ ಖುದ್ದಾಗಿ ವಿಶೇಷ ಮನವಿ ಸಲ್ಲಿಸಿದ್ದರು. ಯುವ ನಾಯಕನ ಕಾಳಜಿಗೆ ತಕ್ಷಣವೇ ಸ್ಪಂದಿಸಿದ ಸಚಿವರು ಈ ಅನುದಾನವನ್ನು ಮಂಜೂರು ಮಾಡಿದ್ದಾರೆ.

ಊರ ದೇವಸ್ಥಾನದ ಅಭಿವೃದ್ಧಿಗೆ ಪಣ:-

“ನಮ್ಮೂರಿನ ದೇವಸ್ಥಾನದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ” ಎಂದು ಪಣತೊಟ್ಟು, ನಿರಂತರವಾಗಿ ಬೆನ್ನುಬಿದ್ದು ಈ ಬೃಹತ್ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಅಜಿತ್ ಕುಮಾರ್ ಶೆಟ್ಟಿ ಅವರು ಸಂಪೂರ್ಣ ಯಶಸ್ವಿ ಯಾಗಿದ್ದಾರೆ.

ಗ್ರಾಮಸ್ಥರಲ್ಲಿ ಹರ್ಷ – ಕೃತಜ್ಞತೆ ಸಲ್ಲಿಕೆ:-

ಈ ಮಹತ್ತರ ಕಾರ್ಯಕ್ಕೆ ವಡ್ಡರ್ಸೆ ಗ್ರಾಮದ ಸಮಸ್ತ ಮಹಾ ಜನತೆ ಹಾಗೂ ದೇವಸ್ಥಾನದ ಭಕ್ತಭಿಮಾನಿಗಳು ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಹಾಗೂ ಶ್ರಮಿಸಿದ ಯುವ ನಾಯಕ ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button