ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಬಸವ ಬಾಲ ಭಾರತಿ – ಶಾಲೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು.
ಢವಳಗಿ ಜೂ.06

ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಮೈದಾನದಲ್ಲಿ ಸಸಿ ನೆಟ್ಟು, ನೀರುಣಿಸು ಮತ್ತು ಮರದ ಪೋಷಣೆ ಮಾಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಮುಖ್ಯಗುರುಗಳಾದ ರಮೇಶ ಮೂಲಿಮನಿ ಮಾತನಾಡಿ ಮಕ್ಕಳಿಗೆ ನಿಮ್ಮ ಸುತ್ತಮುತ್ತಲಿನ ಗಿಡಮರಗಳನ್ನು ಯಾವುದೆ ಕಾರಣಕ್ಕೂ ಕಡಿಯಬೇಡಿ ಮತ್ತು ಕಡಿಯಲು ಬಿಡಬೇಡಿ, ಪ್ರತಿಯೊಂದು ಮರವು ಒಂದು ಇದ್ದಂತೆ.

ನಿಮ್ಮ ಮಗುವನ್ನು ಯಾವ ರೀತಿ ಜೋಪಾನ ಮಾಡುತ್ತೆವೆ ಅದೆ ರೀತಿ ಗಿಡಮರಗಳನ್ನು ಜೋಪಾನ ಮಾಡಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಇದೇ ವೇಳೆಯಲ್ಲಿ ಶಾಲೆಯ ಸಹಶಿಕ್ಷಕರುಗಳಾದ ಜೆ ಎಸ್ ಪಾಟೀಲ, ಜೆ ಎಸ್ ಪಾಟೀಲ, ಬಿ ಎಸ್ ಪಾಟೀಲ, ಎಸ್ ಬಿ ಬಿರಾದಾರ, ಹರಿನಾಥ ಎನ್, ಎಸ್ ಎಸ್ ಅವಟಿ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ:ಜಿ.ಎನ್ ಬೀರಗೊಂಡ (ಮುತ್ತು)

