ಸಿಂದಗಿ ಕ್ಷೇತ್ರವನ್ನು ಹಸಿರು ಕ್ಷೇತ್ರವನ್ನಾಗಿ – ಮಾಡೋಣ ಶ್ರೀಶೈಲಗೌಡ ಬಿರಾದಾರ.
ಸಿಂದಗಿ ಜೂ.06

ಇಂದು ವಿಶ್ವ ಪರಿಸರ ದಿನ. ಈ ಪವಿತ್ರ ದಿನದಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಜೀ ಅವರ ಪರಿಸರ ಸಂರಕ್ಷಣೆಯ ಕರೆಗೆ ಓಗೊಟ್ಟು, ಇಂದು ಸಿಂದಗಿ ವೀಧಾನ ಸಭಾ ಮತ ಕ್ಷೇತ್ರದ BJP ಪಕ್ಷದ ಮುಖಂಡರು ಸನ್ಮಾನ್ಯ ಶ್ರೀ ಶ್ರೀಶೈಲಗೌಡ ಬಿರಾದಾರ ಅವರು ತಮ್ಮ ಫಾರ್ಮ್ ಹೌಸ್‌ನಲ್ಲಿ ಪರಿಸರದ ದೇವರೆಂದೇ ಕರೆಯಲ್ಪಡುವ ‘ಆಲದ ಮರ’ ವನ್ನು ನಡುಸುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.
ನಮ್ಮ ಪ್ರಧಾನಿ ಮೋದೀಜಿಯವರು “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರಕೃತಿಯನ್ನು ರಕ್ಷಿಸುವಂತೆ ಕರೆ ನೀಡಿದ್ದಾರೆ. ಅವರ ದೂರದರ್ಶಿತ್ವದ ಕರೆ ನಮಗೆ ಕೇವಲ ಮಾತಲ್ಲ, ಅದೊಂದು ನಮ್ಮ ಕರ್ತವ್ಯ.

ನಮ್ಮ ಭಾರತೀಯ ಜನತಾ ಪಾರ್ಟಿ ಕೇವಲ ರಾಜಕೀಯ ಮಾಡುವ ಪಕ್ಷವಲ್ಲ. ಇದು ದೇಶದ ಸಂಸ್ಕೃತಿ, ವಿಕಾಸ ಮತ್ತು ಪ್ರಕೃತಿಯನ್ನು ಆರಾಧಿಸುವ ಪಕ್ಷ. ಪ್ರಧಾನಿ ಮೋದೀಜಿಯವರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪರಿಸರ ಸಂರಕ್ಷಣೆಯ ನಾಯಕನನ್ನಾಗಿ ಮಾಡಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿಯೇ ಇಂದು ನಾವು ಸುದೀರ್ಘ ಆಯಸ್ಸು ಮತ್ತು ಅಪಾರ ಆಮ್ಲಜನಕ ಕೊಡುವ ಆಲದ ಮರವನ್ನು ಆಯ್ಕೆ ಮಾಡಿಕೊಂಡು ನೆಟ್ಟಿದ್ದೇವೆ.

ನಮ್ಮ ಸಿಂಧಗಿ ಮತಕ್ಷೇತ್ರವು ಕೃಷಿ ಪ್ರಧಾನವಾದ ಭೂಮಿ. ಇಲ್ಲಿನ ರೈತರು, ಯುವಕರು ಮತ್ತು ಸಾರ್ವಜನಿಕರು ಪರಿಸರದ ಮಹತ್ವವನ್ನು ಚೆನ್ನಾಗಿ ಬಲ್ಲರು. ಪ್ರಕೃತಿಯ ಸಮತೋಲನ ತಪ್ಪಿದರೆ ಮಳೆ ಬೆಳೆ ಎಲ್ಲವೂ ಏರು ಪೇರಾಗುತ್ತದೆ. ಹೀಗಾಗಿ, ಸಿಂಧಗಿ ಕ್ಷೇತ್ರವನ್ನು ಹಸಿರುಮಯವಾಗಿಸುವುದು ಮತ್ತು ಇಲ್ಲಿನ ಪರಿಸರವನ್ನು ಉತ್ತಮಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

ಬನ್ನಿ, ನಾವೆಲ್ಲರೂ ಸೇರಿ ನಮ್ಮ ಸಿಂದಗಿ ಕ್ಷೇತ್ರವನ್ನು ಹಸಿರು ಕ್ಷೇತ್ರವನ್ನಾಗಿ ಮಾಡೋಣ. ಪ್ರತಿಯೊಬ್ಬರೂ ತಮ್ಮ ಮನೆ, ಹೊಲ ಅಥವಾ ಖಾಲಿ ಜಾಗಗಳಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸೋಣ ಎಂದು ಈ ಮೂಲಕ ವಿನಂತಿಸುತ್ತೇನೆ. ಪ್ರಧಾನಿ ಮೋದೀಜಿಯವರ ಹಸಿರು ಭಾರತ’ದ ಸಂಕಲ್ಪವನ್ನು ಹಾಗೂ ಸ್ವಚ್ಛ ಮತ್ತು ಹಸಿರು ಭಾರತದ ಕನಸನ್ನು ನನಸು ಮಾಡೋಣ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

