‘ ಹೌದಾ ಹುಲಿಯಾ ‘ ಹೋಯ್ತು ಈಗ ‘ ಸಿದ್ರಾಮಯ್ಯ ಎನ್ಮಾಡಿದ್ದಾನೆ’ ಸಿದ್ರಾಮಯ್ಯ ಭಾಷಣ ವೇಳೆಯಲ್ಲಿ ಕುಡುಕನ ಕೌಂಟರ್ ..!
ಭಾಷಣ ವೇಳೆ ಕುಡುಕನೊರ್ವ ವೇದಿಕೆ ಮುಂಭಾಗ ಬಂದು ನಿಂತು ಅಡ್ಡಿ ಪಡಿಸಿದ್ದಾನೆ. ಮೊದಲು ಅವನನ್ನು ಕಳಿಸಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿದ್ದಾರೆ. ಕೆಲವರು ಈ ಕಾರ್ಯಕ್ರಮಕ್ಕೆ ಕುಡಿದು ಬರುತ್ತಾರೆ. ಇನ್ನು ಕೆಲವರಿಗೆ ಬೇಕಂತಲೇ ಕುಡಿಸಿ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..!
ಬೆಂಗಳೂರು (ಜನವರಿ.15) :
ಸಿಲಿಕಾನ್ ಸಿಟಿ ಬೆಂಗಳೂರಿನ ದೊಮ್ಮಲೂರಿನಲ್ಲಿ ನಿರ್ಮಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ವೇಳೆ ಘಟನೆ ನಡೆದಿದೆ. ಇನ್ನು ಕಂಚಿನ ಪ್ರತಿಮೆ ಉದ್ಘಾಟನೆ ಮಾಡಿ ತಮ್ಮ ಅನಿಸಿಕೆ ಭಾಷಣ ಆರಂಭಿಸುವಾಗ ಸಿದ್ದರಾಮಯ್ಯನಿಗೆ ಕುಡುಕ ಅಡ್ಡಿ ಮಾಡಿದ್ದಾನೆ. ಭಾಷಣ ಮಾಡುವ ವೇಳೆ ಅಡ್ಡಬಂದ ಕುಡುಕನನ್ನು ಸಿದ್ದರಾಮ ಅವರು ಮೊದಲು ‘ಕಳಸ್ರಿ ‘ ಎಂದು ಗದರಿದ್ದಾರೆ. “ಹೇ ಪೊಲೀಸ್ ಅವರನ್ನ ಕಳುಹಿಸಿ ಆ ಕಡೆ. ಇಂಥವರು ಇರ್ತಾರೆ ಇದಕ್ಕೆ ತಲೆಕಡಸಿಕೊಳ್ಳಬೇಡಿ. ಕೆಲವುರು ಕುಡಿದು ಬಂದಿರ್ತಾರೆ ಇನ್ನೂ ಕೆಲವರಿಗೆ ಕುಡಿಸಿ ಕಳುಹಿಸುತ್ತಾರೆ ” ಎಂದು ಸಿದ್ದರಾಮಯ್ಯ ಕೋಪಿಸಿಕೊಂಡು ಕುಡುಕನ ವಿರುಧ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
‘ಸಿದ್ರಾಮಣ್ಣ ಏನ್ ಸಹಾಯ ಮಾಡಿದ್ದಾರೆ ‘ಎಂದ ಕುಡುಕ:
ನಂತರ, ಶಾಸಕ ಎಚ್.ಎಂ. ರೇವಣ್ಣನವರು ಭಾಷಣ ಮಾಡುವ ವೇಳೆಯಲ್ಲೂ ,ಪೊಲೀಸರು ಹೊರಗೆ ಹಾಕಿದ್ದರು, ವೇದಿಕೆಯ ಬಳಿ ಆಗಮಿಸಿ ಕುಡುಕ ಕಿರಿಕ್ ಮಾಡಿದ್ದಾನೆ. ಹೆಚ್.ಎಂ. ರೆವಣ್ಣ ಅವರು ತಮ್ಮ ಭಾಷಣದಲ್ಲಿ “ಸಿದ್ದರಾಮಯ್ಯ ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನ ನೀಡಿದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ “ಸಿದ್ರಾಮಣ್ಣ ಏನು ಸಹಾಯ ಮಾಡಿದ್ದಾರೆ” ಎಂದು ಕುಡುಕ ಪ್ರಶ್ನೆ ಮಾಡಿದ್ದಾನೆ. ಆಗ ಕುಡುಕನ ಪ್ರಶ್ನೆಗೆ ರೇವಣ್ಣ ಕೂಡ ಗರಂ ಆಗಿದ್ದಾರೆ. ಪುನಃ ಆ ಕುಡುಕನನ್ನೂ ಪೊಲೀಸರು ವೇದಿಕೆ ಬಳಿಯಿಂದ ಹೊರಗಡೆ ಕರೆದೊಯ್ದಿದ್ದಾರೆ.
ಪೊಲೀಸರೊಂದಿಗೆ , ಕಾರ್ಯಕರ್ತರ ಮಾತಿನ ಚಕಮಕಿ
ಇನ್ನು ಪ್ರತಿಮೆ ಅನಾವರಣಕ್ಕೂ ಮುನ್ನ ಸಿದ್ದರಾಮಯ್ಯ ಅವರ ಬಳಿ ಬರಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಕಾರ್ಯಕರ್ತರು ಕೈ- ಕೈ ಮಿಲಾಯಿಸುವ ಮಟ್ಟಿಗೆ ಜಗಳ ಮಾಡಿದ್ದಾರೆ. ಈ ವೇಳೆ ಅದನ್ನು ಬಗೆಹರಿಸುವಂತೆ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ, ಪ್ರತಿಮೆ ಅನಾವರಣ ಮಾಡಿ ಭಾಷಣ ಮಾಡುವಾಗ ವೇದಿಕೆ ಬಳಿ ಮಾತನಾಡುತ್ತಿದ್ದ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದರು. “ಇಲ್ಲಿ ಭಾಷಣ ಕೇಳೋದಕ್ಕೆ ಆಗಲಿಲ್ಲ ಎಂದರೆ ವೇದಿಕೆಯಿಂದ ಆ ಕಡೆ ನಡೆಯಿರಿ, ಇಲ್ಲಿ ಮುಂದೆ ಬಂದು ನಿಂತುಕೊಂಡರೆ ಹಿಂದೆ ನಿಂತವರೆಗೆ ಕಾಣೋದಿಲ್ಲ ಆ ಕಡೆ ಹೋಗಿ. ನಿಮ್ಗೆ ಡಿಸಪ್ಲಿನ್ ಇಲ್ಲ. ಇಂಥ ದೊಡ್ಡ ಕಾರ್ಯಕ್ರಮ ಮಾಡ್ತೀರಾ ಆದರೆ ಶಿಸ್ತು ಇರಲ್ಲ” ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಗದರಿದರು.