ಮಗನ ಸಾವಿನ ನಂತರ, ಅವನ ಮಡದಿಯನ್ನೇ ವರಿಸಿದ ಮಾವ….!
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನೇ ಮದುವೆಯಾಗಿದ್ದಾರೆ. ಛಾಪಿಯಾ ಉಮ್ರಾವ್ ಗ್ರಾಮದ ಕೈಲಾಶ್ ಗೆ ನಾಲ್ಕು ಮಕ್ಕಳಿದ್ದಾರೆ. 12 ವರ್ಷಗಳ ಹಿಂದೆ ಪತ್ನಿ ಮೃತಪಟ್ಟಿದ್ದರು. ಎಲ್ಲಾ ಮಕ್ಕಳೂ ಮದುವೆಯಾಗಿದ್ದಾರೆ. ಕೈಲಾಶ್ ಅವರ ಮೂರನೇ ಮಗ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಆತನ ಪತ್ನಿ ಪೂಜಾ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇದೀಗ ಇಬ್ಬರೂ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ಈ ಮದುವೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ.
ಉತ್ತರಪ್ರದೇಶ (ಗೋರಖ್‌ಪುರ ಜ.27):
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಮದುವೆಯೊಂದು ಸದ್ಯ ಸುದ್ದಿಯಲ್ಲಿದೆ. ಈ ಮದುವೆಯಲ್ಲಿ ವಧು-ವರರ ವಯಸ್ಸು ನೋಡಿದ್ರೆ ಯಾರಾದರೂ ಸರಿ ಶಾಕ್ ಆಗ್ತೀರ. ಆದ್ದರಿಂದ, ಈ ಮದುವೆಯಲ್ಲಿ ವರನ ವಯಸ್ಸು 70 ವರ್ಷಗಳು ಮತ್ತು ವಧುವಿನ ವಯಸ್ಸು 28 ವರ್ಷಗಳು. ಇಬ್ಬರ ನಡುವೆ 42 ವರ್ಷಗಳ ಅಂತರ.
ಆದರೆ ವಧು ಮತ್ತು ವರನ ನಡುವಿನ ಸಂಬಂಧವನ್ನು ತಿಳಿದರೆ ನೀವು ನಿಜವಾಗಿಯೂ ಶಾಕ್ ಆಗುತ್ತೀರಿ. ಇದಕ್ಕೆ ಕಾರಣ ವಧು ವರನ ಸೊಸೆ ಅಂದರೆ ವರನ ಮೂರನೆ ಮಗನ ಹೆಂಡತಿ! ಎನ್ನಲಾಗಿದೆ.
ಈ ಮದುವೆಯ ಬಗ್ಗೆ ಬಂದ ಮಾಹಿತಿಯ ಪ್ರಕಾರ, ಗೋರಖ್‌ಪುರದ ಬದಲ್‌ಗಂಜ್, ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿಯಾದ 70 ವರ್ಷದ ಕೈಲಾಶ್ ಯಾದವ್ ಅವರು ತಮ್ಮ ಮಗನ ಪತ್ನಿ ಪೂಜಾ ಅವರನ್ನು ವರಿಸಿದ್ದಾರೆ. ಅವರ ಸೊಸೆ ಪೂಜಾಗೆ 28 ವರ್ಷ, ಕೈಲಾಸ್‌ಗೆ 70 ವರ್ಷ. ಕೈಲಾಸ್ ಪೊಲೀಸ್ ಠಾಣೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಈ ಮದುವೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ, ಅವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರಿಗೂ ಗೊತ್ತಾಯಿತು. ಸೋಶಿಯಲ್ ಮೀಡಿಯಾದಲ್ಲಿ ಮಾವ ಮತ್ತು ಸೊಸೆಯ ಮದುವೆಯ ಫೋಟೋಗಳನ್ನು ನೋಡಿ ಜನರು ಶಾಕ್ ಆಗಿದ್ದಾರೆ.!
ಕೈಲಾಸ್ ಅವರ ಪತ್ನಿ 12 ವರ್ಷಗಳ ಹಿಂದೆ ನಿಧನರಾಗಿದ್ದರು. ಕೈಲಾಸನಿಗೆ ನಾಲ್ಕು ಗಂಡು ಮಕ್ಕಳಿದ್ದರು. ಈ ಪೈಕಿ ಮೂರನೇ ಮಗ ಸಾವನ್ನಪ್ಪಿದ್ದಾನೆ. ಅದೇ ಮಗನ ಹೆಂಡತಿ ಪೂಜಾನನ್ನು, ಕೈಲಾಸ್ ತನ್ನ ವಿಧವೆ ಸೊಸೆಯನ್ನು ಮದುವೆಯಾಗಿದ್ದಾನೆ. ಪತಿಯ ಮರಣದ ನಂತರ ಪೂಜಾ ಬೇರೆ ಕಡೆ ಮದುವೆಯಾದರು ಎಂಬ ಮಾತು ಕೇಳಿಬಂದಿತ್ತು. ಅಷ್ಟರಲ್ಲಿ ಮಾವನ ಹೃದಯ ಅವಳ ಕಡೆಗೆ ತಿರುಗಿತು. ನಂತರ ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದರು ಮತ್ತು ಯಾವುದೇ ಸಮುದಾಯವನ್ನು ಲೆಕ್ಕಿಸದೆ ಅವರು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯ ಈಗ ಚರ್ಚೆಗೆ ಗ್ರಾಸವಾಗಿದೆ.