ಆಧ್ಯಾತ್ಮಿಕ ಜೀವನದಲ್ಲಿ ಶ್ರದ್ಧೆಯ ಪಾತ್ರ ಹಿರಿದು – ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ ಜೂ.13

ದಿವ್ಯತ್ರಯರಿಗೆ ಮಂಗಳಾರತಿ
ವ್ಯಕ್ತಿಯ ಆಧ್ಯಾತ್ಮಿಕ ಜೀವನದಲ್ಲಿ ಶ್ರದ್ಧೆಯ ಪಾತ್ರ ಅತ್ಯಂತ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ಜಪಾನಂದರ ಸ್ಮೃತಿಗಳ ಪ್ರವಚನ
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ಜಪಾನಂದರ ಸ್ಮೃತಿಗಳ” ಕುರಿತು ವಿಶೇಷ ಪ್ರವಚನ ನೀಡಿದರು.

ಸದ್ಭಕ್ತ ವೃಂದ 💐
ಭಗವಂತ ವ್ಯಕ್ತಿಗಳ ರೂಪದಲ್ಲಿ ನಮ್ಮ ಸಹಾಯಕ್ಕೆ ಬರುತ್ತಾನೆ. ಶ್ರೀರಾಮಕೃಷ್ಣರು ತಾಯಿ ಕಾಳಿಯನ್ನು ಶ್ರದ್ಧಾ ಭಕ್ತಿಯನ್ನು ಕೊಡು ಎಂದು ಪ್ರಾರ್ಥಿಸುತ್ತಿದ್ದ ರೀತಿ ನಮಗೆ ಮಾದರಿ ಯಾಗಬೇಕು. ಶ್ರದ್ಧೆಯ ಬಲದಿಂದ ಭಗವಂತನ ದರುಶನ ಭಾಗ್ಯ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸತ್ಸಂಗದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಬಿ.ಸುಮನಾ, ವಿನೋದ್, ವೆಂಕಟೇಶ್, ಜಿ.ಯಶೋಧಾ, ಮಂಜುಳಾ, ಚೇತನ್, ಕವಿತಾ, ಸುಧಾಮಣಿ, ರಶ್ಮಿ, ರತ್ನಮ್ಮ, ಸುದೀಪ್, ಡಿ. ಕಾವೇರಿ, ಸಿ.ಎಸ್ ಭಾರತಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

