ಮೂರು ಜಿಲ್ಲೆಗೆ ಬೇಕಾದ ಎನ್.ವೈ ಗೋಪಾಲಕೃಷ್ಣ ಸಚಿವ ಸ್ಥಾನಕ್ಕೆ ಆಗ್ರಹಿಸಿ – ಮತದಾರರಿಂದ ಉಪವಾಸ ಸತ್ಯಾಗ್ರಹಕ್ಕೆ ಸಜ್ಜಾಗಿದ್ದಾರೆ.
ಮೊಳಕಾಲ್ಮುರು ಜೂ.13

ಚಿತ್ರದುರ್ಗ ಬಳ್ಳಾರಿ ವಿಜಯನಗರ ಮೂರು ಜಿಲ್ಲೆಯ ಸುಮಾರು ಏಳು ಎಂಟು ಲಕ್ಷ ಮತದಾರರು ಮೊಳಕಾಲ್ಮುರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಶಾಸಕರ ಸ್ಥಳೀಯ ಎಲ್ಲಮ್ಮನ ಎಸ್ಟೇಟ್ ಅಂದರೆ ತಂದೆ ತಾಯಿ ಗದ್ದಿಗೆಯ ತೋಟದ ನಿವಾಸ ಆವರಣದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ಹಾಗೂ ಅಭಿಮಾನಿಗಳ ಸಭೆ ನಡೆಯಿತು.
ಸಭೆಯಲ್ಲಿ ಹಿರಿಯ ಶಾಸಕರಾದ ಶ್ರೀ ಎನ್. ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಇಡೀ ಬಳ್ಳಾರಿ ವಿಜಯನಗರ ಚಿತ್ರದುರ್ಗ ಜಿಲ್ಲೆಯ ಮತದಾರರು ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದಾರೆ.
ಏಕೆಂದರೆ ಹೇಳು ಬಾರಿ ಶಾಸಕರಾಗಿ ಏಳು ಲಕ್ಷ ಮತದಾರರನ್ನು ಓಲೈಕೆ ಮಾಡಿ ಕೊಂಡಂತ ಜನ ನಾಯಕ ಜನ ಸೇವಕ ಜನಾರ್ಧನ ದೀನ ದಲಿತರಿಗೆ ಬೆಳಕಾಗಿ ಬಡವರ ಆಶಾಕಿರಣ ಎಂದು ಕೀರ್ತಿ ಪಡೆದ ಶಾಸಕರು.ಧರ್ಮದ ಹಾದಿಯಲ್ಲಿ ನಡೆದಿದ್ದಾರೆ ನಿರ್ಗತಿಕರಿಗೆ ನಿರಾಸೆತರಿಗೆ ಬಡವರಿಗೆ ದೀನ ದಲಿತರಿಗೆ ಆಸರೆ ಸ್ತಂಭವಾಗಿದ್ದಾರೆ.
ಮತ್ತು ಪ್ರಾಮಾಣಿಕದಿಂದ ಕೆಲಸ ಮಾಡಿದ್ದಾರೆ ಕಾನೂನಿನ ಅಡಿಯಲ್ಲಿ ಯೋಜನೆಗಳು ತಂದಿದ್ದಾರೆ ಒಬ್ಬ ಶಾಸಕರು ಎಷ್ಟು ಕೆಲಸ ಮಾಡಬೇಕು ಅದಕ್ಕಿಂತ ಮೀರಿ ಕ್ಷೇತ್ರದ ಉದ್ದಗಲಕ್ಕೂ ಕೆಲಸಗಳನ್ನು ಮಾಡಿ ಆ ಕ್ಷೇತ್ರದ ಮತದಾರರಿಗೆ ಸಂತೋಷ ವ್ಯಕ್ತಪಡಿಸಿದ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಅಭಿನಂದನೆ ಸಲ್ಲಿಸುವ ಮತದಾರರು ಆಗ್ರಹಿಸಿದರು.

ಏಳು ಬಾರಿ ಶಾಸಕರಾಗಿ ಆಯ್ಕೆ ಯಾಗಿರುವ ಅವರು ಪಕ್ಷದ ನಿಷ್ಠಾವಂತ ಹಿರಿಯ ನಾಯಕರಾಗಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನ ಸೇವೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮುಖಂಡರು ಅಭಿಪ್ರಾಯ ಪಟ್ಟರು.
ಮೊಳಕಾಲ್ಮೂರು, ಕೂಡ್ಲಿಗಿ ಹಾಗೂ ಬಳ್ಳಾರಿ ಭಾಗದ ಅಭಿವೃದ್ಧಿಗೆ ಅವರ ಅನುಭವ ಮತ್ತು ನಾಯಕತ್ವ ಅಗತ್ಯವಿದ್ದು, ಸಚಿವ ಸ್ಥಾನ ದೊರೆತರೆ ಈ ಭಾಗದ ಜನರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಬರಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಕ್ಷೇತ್ರದ ಜನರ ಆಶಯದಂತೆ ಎನ್. ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠ ನಾಯಕರಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಈ ಸಂಬಂಧ ಮುಂದಿನ ದಿನಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ.
ಸಭೆಯಲ್ಲಿ ಮೊಳಕಾಲ್ಮೂರು ಕೂಡ್ಲಿಗಿ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪ್ರಮುಖರು ಭಾಗವಹಿಸಿದ್ದರು.
“ಅನುಭವಕ್ಕೆ ಮನ್ನಣೆ – ಕ್ಷೇತ್ರದ ಅಭಿವೃದ್ಧಿಗಾಗಿ ಎನ್.ವೈ ಗೋಪಾಲಕೃಷ್ಣರಿಗೆ ಸಚಿವ ಸ್ಥಾನ” ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮೂರು

