ಬಿಜೆಪಿ ಶಾಸಕರಿಂದ ಶಿಷ್ಟಾಚಾರ ಉಲ್ಲಂಘನೆ,ಭ್ರಷ್ಟಾಚಾರ, ವೈಫಲ್ಯತೆಗಳ ಬಗ್ಗೆ ಆರೋಪ ಮಾಡಿದ T.S. ರಮೇಶ್….!
ಚಿಕ್ಕಮಗಳೂರು(ಫೆ.12) :
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪುರಸಭಾ ವ್ಯಾಪ್ತಿಯ ಅಳಿಯೂರು ಗ್ರಾಮದಲ್ಲಿ ಶಾಲಾ ಕೊಠಡಿ ದುರಸ್ತಿಯ ಕಾರ್ಯಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ಪುರಸಭಾ ಸದಸ್ಯರು, ಹಾಗೂ ಅಧ್ಯಕ್ಷರನ್ನು ತರೀಕೆರೆ ಬಿಜೆಪಿ ಶಾಸಕರಾದ ಡಿಎಸ್ ಸುರೇಶರವರು ಆಹ್ವಾನಿಸದೆ ಇದೊಂದು ಪಕ್ಕ ಬಿಜೆಪಿ ಕಾರ್ಯಕ್ರಮವೆಂದು ಭಾವಿಸಿ, ಶಿಷ್ಟಾಚಾರ ಉಲ್ಲಂಘನೆ ಮಾಡಿರುತ್ತಾರೆಂದು ತರೀಕೆರೆ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಟಿ ಎಸ್ ರಮೇಶ್ ಹಾಗೂ ಪುರಸಭಾ ಸದಸ್ಯರಾದ ಟಿಜಿ ಶಶಾಂಕ್, ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಪುರಸಭಾ ಸದಸ್ಯರು ಅಧ್ಯಕ್ಷರು, ತರೀಕೆರೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದರು.
ಕಾಂಗ್ರೇಸ್ ಘಟಕದ ಅಧ್ಯಕ್ಷರಾದ T.S. ರಮೇಶ್ ಅವರು BJP ಪಕ್ಷದಿಂದ ಆದ ಭ್ರಷ್ಟಾಚಾರ, ವೈಫಲ್ಯತೆಗಳ ಬಗ್ಗೆ ಆರೋಪವನ್ನು ಮಾಡಿದ್ದಾರೆ, ಬಡವರಿಗೆ,ದೀನ – ದಲಿತರಿಗೆ ಆದ ಅನ್ಯಾಯದ ಬಗ್ಗೆ ನಗರದ ಜನರಿಗೆ ತಿಳಿ ಹೇಳಿದ್ದೇವೆ, ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯೇಯನ್ನು ನೀಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಾಗಿ ಜನರು ಕೂಡ ಹೇಳಿಕೊಂಡಿದ್ದಾರೆ ಎಂದು ಮಾದ್ಯಮದ ಮುಂದೆ ಹೇಳಿದರು.
ಅಲ್ಲದೇ , BJP ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈಗ 5kg ಅಕ್ಕಿಯನ್ನು ಕೊಡುತ್ತಿದ್ದಾರೆ, ಇಂದಿರಾ ಕ್ಯಾಂಟೀನ್ ಅನ್ನು ಕೂಡ ಮುಚ್ಚಿದ್ದಾರೆ,ನಗರದಲ್ಲಿ ಇದುವರೆಗೂ ಯವುದೇ ಅಭಿವೃಧ್ಧಿ ಕಾರ್ಯಗಳು ಆಗಿಲ್ಲ, ಎಂದು ಆರೋಪಿಸಿದರು.
ಮತ್ತು BJP ಸರ್ಕಾರದಲ್ಲಿ ತಾರತಮ್ಯ, ಪಕ್ಷಭೇದ,ಧರ್ಮಗಳ ಧರ್ಮಗಳ ನಡುವೆ ಕೋಮುಗಲಭೆ, ಹೆಚ್ಚಾಗಿದೆ ಎಂದು ಆರೋಪಿಸಿದರು.
- JOIN OUR INSTGRAM COMMUNITY
- JOIN OUR FACEBOOK COMMUNITY
- JOIN OUR TELEGRAM COMMUNITY
- JOIN OUR WHATSAPP COMMUNITY
ಈ BJP ಸರ್ಕಾರದಲ್ಲಿ ಶಾಂತಿ,ಸುವ್ಯವಸ್ಥೆಯಿಂದ ಇರ್ತಕ್ಕಂತ ಈ ಕರ್ನಾಟಕ ನಾಡು ಮತ್ತು ತಾಲೂಕು ಗೊಂದಲ ಗೂಡಾಗಿ , ಬಡವರು, ದೀನ ದಲಿತರು ಬದುಕುವ ಸ್ಥಿತಿ ಇಲ್ಲ ಎಂದು ಹೇಳಿದರು.ಟ್ಯಾಕ್ಸ್, ಗ್ಯಾಸ್ ಮೂಲಕ ಜನರ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಈ ರೀತಿಯಾಗಿ ಮಾಧ್ಯಮದ ಮುಂದೆ ಅವರು ಹೇಳಿಕೊಂಡರು. ಇದರಿಂದ ಜನ ಕೂಡ ಉತ್ತಮ ಪ್ರತಿಕ್ರಿಯೇಯನ್ನು ನೀಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಾಗಿ ಜನರು ಕೂಡ ಹೇಳಿಕೊಂಡಿದ್ದಾರೆ ಎಂದು ನಗರ ಕಾಂಗ್ರೇಸ್ ಘಟಕದ ಅಧ್ಯಕ್ಷರಾದ T.S. ರಮೇಶ್ ರವರು ಪತ್ರಿಕಾಗೋಷ್ಠಿಯನ್ನು ನಡೆಸುವುದರ ಮೂಲಕ ಹೇಳಿದ್ದಾರೆ.