“ಜನಮನದ ಆದಿಕವಿ ವಾಲ್ಮೀಕಿ ಮಹರ್ಷಿ”…..

ಶ್ರೀ ವಾಲ್ಮೀಕಿ ಮಹರ್ಷಿ ಆದಿಕವಿ
ಜಗದ ಸಂಸ್ಕೃತ ಜ್ಞಾನ ರವಿ
ಜನಮಾನಸದ ಮಹಾನ್ ಕವಿ
ಸಂಸ್ಕೃತಿ ಜೀವನ ಗಾಥೆ ರಸ ಋಷಿ
ವೃತ್ತಿಯಲಿ ಬೇಡನಾದರೂ ಜಪಯೋಗಿ
ನಾರದ ಮುನಿಯ ಉಪದೇಶ ಪಾಲಿಪನು
ಮನುಜ ಮತದ ತತ್ವಾದರ್ಶ ವಿಶ್ವದಿ
ತಿಳಿಸಿದನು
ಶ್ರೀರಾಮಾಯಣ ಮಹಾಕಾವ್ಯ ಕರ್ತೃ
ಆದಿಕವಿ ವಾಲ್ಮೀಕಿ ಮಹಾಕಾವ್ಯ ಪ್ರಖ್ಯಾತಿ
ದಯೆ ನಮ್ರತೆ ಜಗದಿ ಸಾರಿದನು
ಜನಮನದ ಕವಿ ಸಿರಿವಂತ ಶ್ರೀಮಹರ್ಷಿ
ವಾಲ್ಮೀಕಿ
ಜಗದಲಿ ವಂದೇ ವಾಲ್ಮೀಕಿ ಕೊಕಿಲಂ
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

