ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಾಗರ ಬಣದ) ಸಂಘಟನೆಯ ನಾಮಫಲಕ ಉ ದ್ಘಾಟನೆಯನ್ನು ಎಂಎಂಜೆ ಹರ್ಷವರ್ಧನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹೂವಿನ ಹಾರ ಹಾಕುವುದರ ಮೂಲಕ ಉದ್ಘಾಟನೆ ನೆರವೇರಿಸಿದರು
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ತೂಲ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುರುಬನಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಗರ ಬಣದ) ಸಂಘಟನೆಯ ನಾಮಫಲಕ ಉದ್ಘಾಟನೆಯನ್ನು ಎಂಎಂಜೆ ಹರ್ಷವರ್ಧನ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ನಾಮಫಲಕ್ಕೆ ಹೂವಿನ ಹಾರ ಹಾಕುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಲಾಯಿತು.



ನಂತರ ಬದ್ದಿ ಮರಿಸ್ವಾಮಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು, ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪೂಜಾರ್ ಸಿದ್ದಪ್ಪ ಡಿಎಸ್ಎಸ್ ತಾಲೂಕು ಸಂಚಾಲಕರು ಜಗಳೂರು ಸತೀಶ್ ಕೃಷ್ಣಪ್ಪ ದುರ್ಗೇಶ್ ಡಿಎಸ್ಎಸ್ ತಾಲೂಕು ಸಂಚಾಲಕರು ಕೂಡ್ಲಿಗಿ ಹನುಮಂತಪ್ಪ ಕುಡಿತಿನಿಮಗ್ಗಿ ಕಾರ್ಯಕ್ರಮದಲ್ಲಿ ನೆರೆದಂತ ಜನಗಳಿಗೆ ಅಂಬೇಡ್ಕರವರ ಜೀವನದ್ದಕ್ಕೂ ನಡೆದು ಬಂದ ದಾರಿಯ ವಿಚಾರಗಳನ್ನು ತಮ್ಮ ತಮ್ಮ ಹಿತನುಡಿಗಳನ್ನು ನುಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದಂತ ಬದ್ದಿ ಮರಿಸ್ವಾಮಿ ಇವರು ಅದರಲ್ಲೂ ಶಿಕ್ಷಣ ಎಂದರೆ ಹುಲಿ ಹಾಲಿದ್ದಂತೆ ಶಿಕ್ಷಣವನ್ನು ಕಲಿತವರು ಘರ್ಜಿಸಬೇಕು ಎಂದು ಅಂಬೇಡ್ಕರವರ ಹಿತ ನುಡಿಯನ್ನು ವೇಧಿಕೆಯ ಮೂಲಕ ತಿಳಿಸಿದರು, ಹಾಗೂ ವಿಶ್ವಜ್ಞಾನಿ ಯಾರು ಎಂದರೆ ಅದು ಡಾ. ಬಿಆರ್ ಅಂಬೇಡ್ಕರ್ ರವರು ಎಂದು ಎಲ್ಲಾ ದೇಶಗಳು ಹಾಗೂ ವಿಶ್ವಸಂಸ್ಥೆಯು ಕೂಡ ಒಪ್ಪಿಕೊಂಡಿದೆ.
ಇಂತಹ ಮಹಾತ್ಮ ನಮ್ಮದೇಶದಲ್ಲಿ ಹುಟ್ಟಿ ದಲಿತರಿಗೆ ಹಾಗೂ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಭಾರತ ಸಂವಿಧಾನ ಮೂಲಕ ಹಕ್ಕು ಮತ್ತು ಕಾನೂನನ್ನು ರೂಪಿಸಿ ಅವರು ಬರೆದಂತ ಸಂವಿಧಾನ ನಮ್ಮ ದೇಶಕ್ಕೆ ಒಂದು ದೊಡ್ಡ ಕೊಡುಗೆ ಆದರಿಂದ ಈ ಎಲ್ಲಾ ಜನಾಂಗಕ್ಕೂ ಸಮುದಾಯಕ್ಕೂ ಧರ್ಮಗಳಿಗೂ ಸಮಾನತೆ ಸಿಗುತ್ತದೆ ಎಂದು ಹೇಳಿದರು, ನಂತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟುಕೊಂಡು ಡಿಜೆ ಮೂಲಕ ಕುರುಬನಳ್ಳಿಯ ತುಂಬಾ ಸಂಘಟನೆ ಯುವಕರುಗಳು ಸಂತೋಷದಿಂದ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಹಳ್ಳಿಯ ಜನರು ಕುರುಬನಳ್ಳಿ ಎಲ್ಲಾ ಸಾರ್ವಜನಿಕರು ಹಾಗೂ ಹೆಚ್ಚಾಗಿ ಮಹಿಳಿಯರು ಸಹ ಈ ಕಾರ್ಯಕ್ರಮದಲ್ಲಿ ಭಾಗವಯಿಸಿದ್ದರು.
ಜಿಲ್ಲಾ ವರದಿಗಾರರು: ರಾಘವೆಂದ್ರ ಸಾಲುಮನಿ