ರಾಜ್ಯ ಹೆದ್ದಾರಿ ರಸ್ತೆ 24ರ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ದಿ
ತರೀಕೆರೆ ಮಾರ್ಚ್:26
ತರೀಕೆರೆ-ಕ್ಷೇತ್ರದ್ಯಾಂತ ಸಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ಶಾಸಕರಾದ ಡಿಎಸ್ ಸುರೇಶ ಕೆ ಹೊಸೂರಿನಲ್ಲಿ ಏರ್ಪಡಿಸಿದ್ದ, ತರೀಕೆರೆ ಧರ್ಮಪುರ ರಾಜ್ಯ ಹೆದ್ದಾರಿ ರಸ್ತೆ 24ರ ಅಂದರೆ ಕೆ ಹೊಸೂರಿನಿಂದ ಆಯ್ದ ಭಾಗಗಳಲ್ಲಿ ಒಂದು ಕೋಟಿ 50 ಲಕ್ಷ ರೂಗಳ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.


ಅಜ್ಜಂಪುರ ತರೀಕೆರೆ ತಾಲೂಕುಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಗುರುತಿಸಿ ಜನರು ಮತ್ತೊಮ್ಮೆ ನನ್ನ ಆಯ್ಕೆಯನ್ನು ಬಯಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂಜುಂಡಪ್ಪ, ಬಿಜೆಪಿಯ ಮಂಡಲ ಅಧ್ಯಕ್ಷರಾದ ರಾಜಶೇಖರ್ ಎಂ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾಲಿಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಾವಣ್ಯ, ಅಭಿಯಂತರರಾದ ಜೆ ಯು ಸಿ ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ