ನೂತನವಾಗಿ ಜರುಗಿದ ಶ್ರೀ ಜಗಜ್ಯೋತಿ – ಬಸವಣ್ಣನವರ ವೃತ್ತ ಸ್ಥಾಪನೆ.
ಗುಡೇಕೋಟೆ ಏ.30

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ವೀರಶೈವ ಲಿಂಗಾಯಿತ ಸಮಾಜದಿಂದ ಜರುಗಿದ ಶ್ರೀ ಜಗಜ್ಯೋತಿ ಬಸವಣ್ಣ ಜಯಂತಿ ಹಾಗೂ ನೂತನವಾಗಿ ನಾಮಫಲಕ ವೃತ್ತ ಸ್ಥಾಪನೆಯ ಅಂಗವಾಗಿ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನದಿಂದ ರಾಂಪುರ ರಸ್ತೆಯಲ್ಲಿರುವ ತಿರುಗು ಬಸವಣ್ಣನ ಕಟ್ಟೆಯವರಿಗೆ ಎತ್ತುಗಳ ಮೆರವಣಿಗೆ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ನಂತರ ನೂತನ ಶ್ರೀ ಜಗಜ್ಯೋತಿ ಬಸವಣ್ಣನವರ ವೃತ್ತ ಸ್ಥಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿದ್ದ ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಹಾಗೂ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ, ಜಿ.ಶಿವಪ್ರಸಾದ್ ಗೌಡ್ರು,ದಿನ್ನೆ ನಾಗರಾಜ್, ಅಂಗಡಿ ಈಶ್ವರ್, ಮಠದ ಶಿವಕುಮಾರ್ ಸ್ವಾಮಿ, ಎರ್ರಿಸ್ವಾಮಿ, ಪೂಜಾರ್ ಸಿದ್ದಣ್ಣ, ಎಲೆ ಕರಿಬಸಜ್ಜಯ್ಯ, ಹೋಟೆಲ್ ವೀರಭದ್ರಪ್ಪ,ಜಿ. ನಿಂಗಣ್ಣ, ಜೋಡುಗಪ್ಲೆ ರಮೇಶ, ಪಿ ಪಂಚಾಕ್ಷರಿ, ಪುಂಡಿ ವೀರೇಂದ್ರ, ಜೋಡುಗಪ್ಲೆ ನಾಗೇಶ್, ಕ ರ ವೇ ಅಧ್ಯಕ್ಷ ಜೆ. ಶಿವಕುಮಾರ್,ಪಿ. ಮರಳುಸಿದ್ದಪ್ಪ, ಪಿ.ಶಿವಕುಮಾರ್, ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

