ವಿಶ್ವ ಶಾಂತಿಗೆ ಯುದ್ಧ ಅಲ್ಲ ಬುದ್ದ ಬೇಕು – ತರೀಕೆರೆ ಎನ್ ವೆಂಕಟೇಶ್.

ತರೀಕೆರೆ ಮೇ.02

ಬಡತನಕ್ಕಿಂತ ದೊಡ್ಡ ಶಾಪವಿಲ್ಲ, ಹಸಿವಿಗೆ ಹಿರಿದಾದ ರೋಗವಿಲ್ಲ, ಭಗವಾನ್ ಬುದ್ಧ ಏಕಕಾಲಕ್ಕೆ ವೈದ್ಯರು, ಸಾಮಾಜಿಕ ಹೋರಾಟಗಾರರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ತರೀಕೆರೆ ಎನ್ ವೆಂಕಟೇಶ್ ಹೇಳಿದರು.

ಅವರು ಇಂದು ಪಟ್ಟಣದ ತಾಲೂಕು ಆಡಳಿತ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಬುದ್ಧನ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ತಳ ಸಮುದಾಯದ ಉಪಲಿ, ಸುನಿತಾ. ಸುಪ್ರಿಯ, ಸುಮಂಗಲ ಬಡವ ಚಂದ ವೇಶ್ಯೆ ಆಮ್ರಪಾಲಿ ಯವರಂತವರಿಗೆ ಉಪ ದೇಶಗಳ ನೀಡಿ ಸಾಮಾನ್ಯರ ಒಡನಾಟ ಹೊಂದಿದ್ದರು. ಬುದ್ಧ ಮಾರ್ಗದಲ್ಲಿ ನಡೆಯುವುದೆಂದರೆ ವಿಶ್ವವನ್ನು ಸೌಹಾರ್ದಾದ ಪಥದಲ್ಲಿ ಕೊಂಡೊಯ್ಯುವುದಾಗಿದೆ, ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ಅವರು ಬುದ್ಧ ದಮ್ಮ ದೀಕ್ಷೆ ಪಡೆದ ನಂತರ ಹೇಳುತ್ತಾರೆ ಇದು ಮತಾಂತರ ಅಲ್ಲ ನಾನೀಗ ನನ್ನ ಮನೆಗೆ ವಾಪಸ್ ಆಗಿದ್ದೇನೆ ಎಂದು ಸ್ವಾತಂತ್ರ ಸಮಾನತೆ ಸೋದರತೆ ಮಾನವೀಯತೆಯ ಜೀವ ದ್ರವ್ಯಗಳಿಂದಲೇ ಸಂವಿಧಾನ ರೂಪಗೊಂಡಿದೆ ಇಂದು ವಿಶ್ವ ಶಾಂತಿಗೆ ಯುದ್ಧ ಅಲ್ಲ ಬುದ್ಧ ಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ಟಿ.ಎನ್ ಜಗದೀಶ್ ಮಾತನಾಡಿ ಇಂದಿನ ಮಕ್ಕಳಿಗೆ ಸಂವಿಧಾನ ಕುರಿತು ಬುದ್ಧನ ಅಹಿಂಸ ಮಾರ್ಗವನ್ನು ತಿಳಿಸಬೇಕು ಯುದ್ಧದಿಂದ ಜೀವ ಹಾನಿ ಯಾಗುವುದನ್ನ ತಪ್ಪಿಸಬೇಕು ಬುದ್ಧನ ಧ್ಯಾನ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.

ವಸತಿ ಭೂಮಿ ಹೋರಾಟ ಸಮಿತಿಯ ಅಧ್ಯಕ್ಷರಾದ ಓಂಕಾರಪ್ಪ ಮಾತನಾಡಿ ಹಿಂಸೆಯಿಂದ ಮಾನವ ಕುಲಕ್ಕೆ ಶಾಂತಿ ನೆಮ್ಮದಿ ಇಲ್ಲ ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾರೆ ಎಂದು ಹೇಳಿದರು. ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ ಶುದ್ಧೋದನ ಮಾಯಾದೇವಿಯ ಮಗನಾಗಿ ಜನಿಸಿದ ಬುದ್ಧ 2500 ವರ್ಷಗಳ ಹಿಂದೆ ಕ್ರಿಸ್ತ ಪೂರ್ವ ದಲ್ಲಿ ರಾಜ ಭೋಗ ಜೀವನ ತೊರೆದು ಹಿಂಸೆಗೆ ಮೂಲ ಕಾರಣ ಹುಡುಕಲು ಹೆಂಡತಿ ಮಕ್ಕಳನ್ನು ರಾಜ ಅಧಿಕಾರವನ್ನು ಬಿಟ್ಟು ಅರ್ಧ ರಾತ್ರಿಯಲ್ಲಿ ಕಾಡಿಗೆ ಹೋಗಿ ತಪಸ್ಸು ಮಾಡಿದರು ವೇಶ್ಯೆಯನ್ನೇ ತನ್ನ ಉಪ ದೇಶದಿಂದ ಬದಲಾವಣೆ ಮಾಡಿದರು ಎಂದು ಹೇಳಿದರು.

ಶಿರಸ್ತೆದಾರ್ ನಟರಾಜ್ ಮಾತನಾಡಿ ಸಮಾಜದಲ್ಲಿನ ಹಿಂಸೆಗಳನ್ನು ಕಂಡು ಭೋಗ ಜೀವನ ತ್ಯಜಿಸಿ ಬೋಧಿ ವೃಕ್ಷದ ಕೆಳಗೆ ಧ್ಯಾನ ಮಾಡಿ ಇಂದ್ರಿಯಗಳನ್ನು ನಿಗ್ರಹಿಸಿ ವೇಶ್ಯೆಗೆ ಉಪ ದೇಶ ನೀಡಿ ಮಹಿಳಾ ಸಂಘಟನೆಗಳು ಉದಯವಾಗಲು ಕಾರಣರಾದವರು ಬುದ್ಧ, ಅಶೋಕ ಚಕ್ರವರ್ತಿ ಯುದ್ಧ ತೊರೆದು ಬುದ್ಧ ಧರ್ಮವನ್ನು ಅನುಸರಿಸಿದರು ಎಂದು ಹೇಳಿದರು.

ಮಿಲ್ಟ್ರಿ ದೇವೇಂದ್ರ ಆರ್ ಐ ರೇವಣ್ಣ,ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದು ಡಿವೈಎಸ್ಪಿ ಪರಶುರಾಮಪ್ಪ ಅವರು ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಬುದ್ಧನ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಜುನಾಥ್ ಸ್ವಾಗತಿಸಿ ವಂದಿಸಿದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button