ಶ್ರೀ ಕೊಡೆಕಲ್ ಬಸವೇಶ್ವರರ ಅದ್ದೂರಿ – ಪಲ್ಲಕ್ಕಿ ಉತ್ಸವ ಜರುಗುವುದು.

ಗುಂಡಕರ್ಜಗಿ ಮೇ.02

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೊಡೆಕಲ್ ಬಸವೇಶ್ವರ ಜಾತ್ರಾ ಮಹೋತ್ಸವವು ಕೊಡೆಕಲ್ಲ ಮಠದ ವ್ರಸ ಬೆಂದ್ರ ಅಪ್ಪನವರು ದಾಸೋಹ ಮನೆ ಮಹಾಲಿನಮಠ ಬಸವ ಪೀಠ ಕೊಡೆಕಲ್ ಇವರ ಸಾನಿಧ್ಯದಲ್ಲಿ ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ಜರುಗುವುದು.

ಮೇ 4 ಸೋಮವಾರ ದಂದು ಬೆಳಗ್ಗೆ 04:00 ಗಂಟೆಗೆ ಗಂಗಾ ಸ್ಥಳದಿಂದ ಬಸವೇಶ್ವರ ದೇವಸ್ಥಾನದ ವರೆಗೆ ಭಕ್ತಾದಿಗಳು ದೀಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಬಸವೇಶ್ವರ ದೇವರಿಗೆ ಮುಟ್ಟಿಸುತ್ತಾರೆ. ಅಂದೇ ಬೆಳಿಗ್ಗೆ 10:00 ಗಂಟೆಗೆ ಊರಿನ ಎಲ್ಲಾ ಭಕ್ತಾದಿಗಳು ಉಪ್ಪಲದಿನ್ನಿ ಅವರ ಮನೆಯಿಂದ ಸಕಲ ವಾದ್ಯಗಳೊಂದಿಗೆ ಹಾಗೂ ಭಜನೆಗಳ ಮೂಲಕ ಕೊಡೆಕಲ್ಲ ಬಸವೇಶ್ವರ ವಚನ ಹೇಳುವುದರ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿ ತಲುಪುವುದು, ಅಂದೇ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುತ್ತದೆ ಅಂದೇ ರಾತ್ರಿ 10:00 ಗಂಟೆಗೆ ಶ್ರೀ ಹನುಮಾನ್ ನಾಟ್ಯ ಸಂಘ ಮುಧೋಳ್ ಜಿಲ್ಲಾ ಬಾಗಲಕೋಟೆ ಇವರಿಂದ ಶ್ರೀಶೈಲ್, ಮ, ಅಂಗಡಿ ಇವರ ಸಾಹಿತ್ಯದಲ್ಲಿ” ಸಂಗ್ಯಾ ಬಾಳ್ಯಾ ಅರ್ಥಾರ್ಥ್ “ಗುಂಗು ಹಿಡಿಸಿದ ಗಂಗಿ” ಎಂಬ ಸುಂದರ ಸಾಮಾಜಿಕ ಹಾಗೂ ಹಾಸ್ಯ ಭರಿತ ಬೈಲಾಟ ನಾಟಕ ಜರಗುವುದು.

ಮೇ 5 ಮಂಗಳವಾರ ದಂದು ಬೆಳಗ್ಗೆ 11:00 ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ಉಪ್ಪಲದಿನ್ನಿಯವರ ಮನೆಗೆ ಭಜನೆಗಳ ಮೂಲಕ ಪಲ್ಲಕ್ಕಿ ಮರಳಿ ಹೋಗುತ್ತವೆ, ಮೇ 8 ಶುಕ್ರವಾರ ದಂದು ಶ್ರೀ ಗ್ರಾಮ ದೇವತೆ ಉಡಿ ತುಂಬವ ಕಾರ್ಯಕ್ರಮ ಬೆಳಗ್ಗೆ 10:00 ಗಂಟೆಗೆ ಡೊಳ್ಳುಗಳ ಮೂಲಕ ಗಂಗಾ ಸ್ಥಳಕ್ಕೆ ಹೋಗಿ ಬರುವುದು ನಂತರ ಉಡಿ ತುಂಬವ ಕಾರ್ಯಕ್ರಮ ಜರುಗುತ್ತದೆ ನಂತರ ಅನ್ನ ಸಂತರ್ಪಣೆ ಇರುತ್ತದೆ ಎಂದು ಜಾತ್ರಾ ಕಮೀಟಿ ಅವರು ತಿಳಿಸಿರುತ್ತಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button