71 ವರ್ಷಗಳ ಇತಿಹಾಸವಿರುವ ಕಟ್ಟಡಕ್ಕೆ ಕುತ್ತು ಅಧಿಕಾರಿಗಳ ಭೇಟಿ ಬರೀ ಪ್ರದರ್ಶನವೇ..? ಶಾಸಕ ಜಿ.ಎಸ್ ಪಾಟೀಲ ಅವರಿಗೆ – ಗ್ರಾಮಸ್ಥರಿಂದ ಶಾಶ್ವತ ಪರಿಹಾರಕ್ಕಾಗಿ ಮೊರೆ.

ಜಕ್ಕಲಿ ಮೇ.02

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಆಡಳಿತದ ಕೇಂದ್ರವಾಗಿರುವ ಜಕ್ಕಲಿ ಗ್ರಾಮ ಪಂಚಾಯಿತಿ ಕಚೇರಿ ಇಂದು ಗಂಭೀರ ಶಿಥಿಲಾವಸ್ಥೆಗೆ ತಲುಪಿದ್ದು, ತಾತ್ಕಾಲಿಕವಾಗಿ ತಾರ್ಪಾಲಿನ್ ಹೊದಿಕೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ದುಸ್ಥಿತಿ ಎದುರಾಗಿದೆ. ಕಳೆದ ಏಪ್ರಿಲ್ 21ರಂದು ಬೀಸಿದ ಭೀಕರ ಬಿರುಗಾಳಿ ಮತ್ತು ಭಾರೀ ಮಳೆಗೆ ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಹಾನಿಗೊಳಗಾಗಿ ರುವುದರಿಂದ ಮಳೆನೀರು ನೇರವಾಗಿ ಕಚೇರಿಯೊಳಗೆ ಬಿಳ್ಳುವಂತ ಪರಸ್ಥಿತಿ ನಿರ್ಮಾಣವಾಗಿದೆ.

1955 ರ ಫೆಬ್ರವರಿ 3 ರಂದು ಸ್ಥಾಪನೆಯಾದ ಈ ಪಂಚಾಯಿತಿ ಕಟ್ಟಡವು ಸುಮಾರು ಏಳು ದಶಕಗಳ ಕಾಲ ಗ್ರಾಮ ಆಡಳಿತದ ಹೃದಯವಾಗಿ ಸೇವೆ ಸಲ್ಲಿಸಿದೆ. ಅಂದು ಬೀಸಿದ ಗಾಳಿ-ಮಳೆಗೆ ಮೇಲ್ಚಾವಣಿಯ ಹಳೆಯ ತಗಡುಗಳು ಸಂಪೂರ್ಣವಾಗಿ ಹಾರಿ ಹೋಗಿದ್ದು, ಈಗ ಕಚೇರಿಯು ಕೇವಲ ತಾತ್ಕಾಲಿಕ ತಾರ್ಪಾಲಿನ್ ಆಶ್ರಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುವಂತಾಗಿದೆ. ಈ ಕಟ್ಟಡವು ಕೇವಲ ಆಡಳಿತ ಕಚೇರಿಯಲ್ಲ, ಗ್ರಾಮ ಇತಿಹಾಸದ ಸಾಕ್ಷಿಯಾಗಿರುವುದರಿಂದ ಅದನ್ನು ಉಳಿಸುವುದು ಇಂದು ತುರ್ತು ಅಗತ್ಯವಾಗಿದೆ.

ಶಾಸಕರಿಗೆ ಮನವಿ – ತುರ್ತು ಕ್ರಮಕ್ಕೆ ಆಗ್ರಹ.. ಪತ್ರ

ಪಂಚಾಯಿತಿ ಕಚೇರಿಯಲ್ಲಿ ಗ್ರಾಮಸ್ಥರ ಜನನ-ಮರಣ ಪ್ರಮಾಣಪತ್ರಗಳು, ಆಸ್ತಿ ದಾಖಲೆಗಳು (ಫಾರಂ ನಂ. 9 ಮತ್ತು 11) ಸೇರಿದಂತೆ ಅತ್ಯಂತ ಪ್ರಮುಖ ಕಡತಗಳು ಸಂಗ್ರಹವಾಗಿವೆ. ಮಳೆ ನೀರು ನೇರವಾಗಿ ಒಳಗೆ ಬೀಳುತ್ತಿರುವುದರಿಂದ ಈ ಅಮೂಲ್ಯ ದಾಖಲೆಗಳು ನೆನೆದು ನಾಶವಾಗುವ ಭೀತಿ ಎದುರಾಗಿದೆ. ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಮಳೆಗೆ ಸಿಲುಕಿ ಕೆಟ್ಟುಹೋಗುತ್ತಿದ್ದು, ಸಿಬ್ಬಂದಿ ಕೆಲಸ ನಿರ್ವಹಿಸುವುದಕ್ಕೂ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಕ್ಸ್ ನ್ಯೂಸ್:-

ಘಟನೆ ನಡೆದ ಮರುದಿನವೇ ತಹಶೀಲ್ದಾರ್ ನಾಗರಾಜ್ ಕೆ. ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಅಧಿಕಾರಿಗಳು ಬಂದು ಹೋಗಿ ವಾರ ಕಳೆದರೂ ಯಾವುದೇ ಶಾಶ್ವತ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕಚೇರಿಯ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ತಾರ್ಪಾಲಿನ್ ಕಟ್ಟಿ ಕೆಲಸ ನಿರ್ವಹಿಸುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಬಂದು ನೋಡಿ ಹೋಗುವುದು ಮಾತ್ರವಲ್ಲ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಮರು ದಿನವೇ ತಹಶೀಲ್ದಾರ್ ನಾಗರಾಜ್ ಕೆ. ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ್ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ

ಬಾಕ್ಸ್ ನ್ಯೂಸ್:-

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಸಮಸ್ಯೆಯ ಗಂಭೀರತೆಯನ್ನು ಗಮನಿಸಿ, ಈಗಾಗಲೇ ರೋಣ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಳೆಯ ತಗಡುಗಳ ಬದಲು ಶಾಶ್ವತವಾಗಿ ಆರ್‌ಸಿಸಿ (RCC) ಸ್ಲ್ಯಾಬ್ ನಿರ್ಮಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಮಳೆಗಾಲ ಇನ್ನಷ್ಟು ತೀವ್ರ ಗೊಳ್ಳುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಎಚ್ಚೆತ್ತು ಕೊಂಡು ತಕ್ಷಣ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾತ್ಕಾಲಿಕ ತಾರ್ಪಾಲಿನ್ ಆಶ್ರಯದಲ್ಲಿ ನಡೆಯುತ್ತಿರುವ ಪಂಚಾಯಿತಿ ಕಾರ್ಯಾಚರಣೆ ಈಗ ಗ್ರಾಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ದಾಖಲೆಗಳ ಸುರಕ್ಷತೆ, ಸಿಬ್ಬಂದಿಯ ಕೆಲಸದ ಪರಿಸ್ಥಿತಿ ಹಾಗೂ ಕಟ್ಟಡದ ಭವಿಷ್ಯ ಕುರಿತು ತಕ್ಷಣದ ಕ್ರಮಕ್ಕೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ವರದಿ:ಅಂದಪ್ಪ.ಮಾದರ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button